February 1, 2026

ಕಾರ್ಕಳ: ಪೆಟ್ರೋಲ್ ಸೋರಿಕೆಯಿಂದ ಹೊತ್ತಿ ಉರಿದ ಕಾರು

0
21-08-25-karkala-car.2.jpg

ಕಾರ್ಕಳ: ಪೆಟ್ರೋಲ್ ಸೋರಿಕೆಯಾಗಿ ಕಾರೊಂದು‌ ಹೊತ್ತಿ ಉರಿದ ಘಟನೆ ಸಾಣೂರು ಪೆಟ್ರೋಲ್ ಬಂಕ್ ಸಮೀಪದ ರಾಷ್ಟ್ರೀಯ ಹೆದ್ದಾರಿ-169ರಲ್ಲಿ ಸಂಭವಿಸಿದೆ.

ಮಧ್ಯಾಹ್ನ ಸುಮಾರು 1.00 ಗಂಟೆಯ ವೇಳೆಗೆ ಮೂಡುಬಿದಿರೆ ಕಡೆಗೆ ತೆರಳುತ್ತಿದ್ದ ಕೆಎ ೦4 ಎಂ 1166 ಕಾರು ಘಟನೆಯಲ್ಲಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ‌ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಅಗಮಿಸಿ ಬೆಂಕಿ‌ ನಂದಿಸಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ‌ದಳ‌ ಠಾಣಾಧಿಕಾರಿ ಅಲ್ಬಟ್೯ ಮೋನಿಸ್, ಸಹಾಯಕ‌ಠಾಣಾಧಿಕಾರಿ ಚಂದ್ರಶೇಖರ್, ಸಹಾಯಕರಾದ ಅಚ್ಚುತ ಕರ್ಕೇರಾ, ದಿನೇಶ್ ಚಾಲಕ ಜಯಮೂಲ್ಯ ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!