ಬಂಟ್ವಾಳದ ಮಂಚಿಯಲ್ಲಿ ಕಾರು ಅಪಘಾತ: ಕಾರಿನಲ್ಲಿದ್ದ ಆರೋಪಿಯ ಬಂಧನ
ಬಂಟ್ವಾಳ: ಕೇರಳದ ಪೋಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಕೇರಳ ಮೊಹಮ್ಮದ್ ರಾಝಿಕ್ ಎಂಬಾತನ ಕಾರು ಬಂಟ್ವಾಳದ ಮಂಚಿಯಲ್ಲಿ ಅಪಘಾತವಾಗಿದೆ.
ಈತನ ಕಾರು ಇನ್ನೊಂದು ಕೇರಳ ಮೂಲದ ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಈತನ ಜೊತೆ ಸ್ನೇಹಿತರಾದ ಸಿಬಿನ್, ಸಯ್ಯದ್ ಮಹಮ್ಮದ್ ಆಲ್ ಅಮೀನ್ ಎಂಬವರು ಕೂಡ ಕಾರಿನಲ್ಲಿ ಇದ್ದರು ಎನ್ನಲಾಗಿದೆ.
ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಈತ ಹಳೆಯ ಆರೋಪಿ ಕೂಡ ಆಗಿದ್ದ ಎನ್ನಲಾಗಿದೆ. ಹಾಗಾಗಿ ಪೋಲೀಸರ ತಂಡ ಈತನನ್ನು ಬಂಧನಕ್ಕೆ ಬಲೆ ಬೀಸಿತ್ತು. ಮಂಗಳವಾರ ಮಧ್ಯಾಹ್ನ ಕಾರು ಬಂಟ್ವಾಳದ ಕಡೆ ಹೋಗುತ್ತಿರುವ ಖಚಿತ ಮಾಹಿತಿ ಪಡೆದ ಕೇರಳ ಪೋಲೀಸರ ತಂಡ ಈತನ ಬೆನ್ನ ಹಿಂದೆ ಬಿದ್ದಿದ್ದರು.
ಮಂಚಿಯ ಮೋಂತಿಮಾರು ಎಂಬಲ್ಲಿ ಕೇರಳ ಮೂಲದ ಆಲ್ಟ ಕಾರೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಆರೋಪಿ ಯತ್ನಿಸಿದ್ದ. ಆದರೆ ಪೋಲೀಸರು ಈತನನ್ನು ಬಂಧಿಸಿದ್ದಾರೆ.




