ಬೈಕ್‌ಗೆ ಇನ್ನೋವಾ ಢಿಕ್ಕಿ: ಅಣ್ಣ-ತಂಗಿ ಸಾವು
ಕೋಲಾರ: ತಂಗಿಯ ಅಡ್ಮಿಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಣ್ಣ-ತಂಗಿಯಿದ್ದ ಬೈಕ್‌ಗೆ ಇನ್ನೋವಾ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕು ಶ್ರೀನಿವಾಸಪುರ ರಸ್ತೆಯಲ್ಲಿರುವ ವೀರಾಪುರ ಗೇಟ್ ಬಳಿಯ ಮಹರ್ಷಿ ಶಾಲೆ ಬಳಿ ಈ ಘಟನೆ ನಡೆದಿದೆ. ಕೋಲಾರ ತಾಲೂಕಿನ ಕೊಂಡೇನಹಳ್ಳಿ ನಿವಾಸಿಗಳಾದ ಯಶಸ್ವಿನಿ ಬಾಯಿ (16) ಹಾಗೂ ಹರ್ಷಿತ್ ಸಿಂಗ್ (20) ಮೃತ ಅಣ್ಣ-ತಂಗಿ ಎಂದು ಗುರುತಿಸಲಾಗಿದೆ.




