February 2, 2026

ಥಿನ್ನರ್ ಬಾಟಲಿ ಬಿದ್ದು ಬೆಂಕಿ ಅವಘಡ: ಮಗು, ತಂದೆ ಸಾವು

0
image_editor_output_image2115575084-1755586437952.jpg

ಧಾರವಾಡ: ಥಿನ್ನರ್ ಬಾಟಲಿ ಬಿದ್ದು ಬೆಂಕಿ ಹಚ್ಚಿಕೊಂಡು ಮಗು ಸಾವನಪ್ಪಿದ ಬೆನ್ನಲ್ಲೇ ಇದೀಗ ಗಂಭೀರವಾಗಿ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾರೆ.

ಚಂದ್ರಕಾಂತ್ ಮಾಶ್ಯಾಳ ಮೃತ ದುರ್ದೈವಿ. ಅಗಸ್ಟ್ 15 ರಂದು ಧಾರವಾಡದ ಸಂತೋಷ್ ನಗರದಲ್ಲಿ ಮನೆಯಲ್ಲಿ ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿ ಇಡಲಾಗಿತ್ತು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ 4 ವರ್ಷದ ಅಗಸ್ತ್ಯ ಥಿನ್ನರ್ ಬಾಟಲಿಯನ್ನು ಕೆಡವಿದ್ದ. ಈ ವೇಳೆ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಾಲಕನ ದೇಹ ಸುಟ್ಟು ಹೋಗಿತ್ತು. ಮಗನನ್ನು ಕಾಪಾಡಲು ಹೋಗಿದ್ದ ಚಂದ್ರಕಾಂತ್‌ಗೆ ಸಹ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಕಾಂತ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ತಂದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!