ಉಳ್ಳಾಲ: ತೌಡುಗೋಳಿಯ ನಿವಾಸಿ ಹೃದಯಾಘಾತದಿಂದ ಮೃತ್ಯು
ಉಳ್ಳಾಲ: ಅಜೀರ್ ದರ್ಗಾಕ್ಕೆ ತೆರಳಿದ್ದ ತೌಡುಗೋಳಿಯ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.
ನರಿಂಗಾನ ವರ್ಕಾಡಿ ಗಡಿ ಭಾಗ ತೌಡುಗೋಳಿಯ ನಿವಾಸಿ, 60 ವರ್ಷದ ಶೇಖಬ್ದುಲ್ಲ ಮೃತ ವ್ಯಕ್ತಿ. ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಲ್ಲಿ ಲಿಂಬೆ ಹಣ್ಣು ವ್ಯಾಪಾರಿಯಾಗಿದ್ದ ಶೇಖಬ್ದುಲ್ಲ ಮೂರು ದಿನಗಳ ಹಿಂದೆ ತನ್ನ ಮಿತ್ರರೊಂದಿಗೆ ಮಂಗಳೂರಿನಿಂದ ಅಜ್ಮಿರ್ ದರ್ಗಾ ಪ್ರವಾಸ ಕೈಗೊಂಡಿದ್ದರು.
ಶುಕ್ರವಾರ ದರ್ಗಾ ದರ್ಶನ ಮುಗಿಸಿದ ಬಳಿಕ ಎದೆನೋವು ಕಂಡುಬಂದಿದ್ದು ಆಸ್ಪತ್ರೆಗೆ ದಾಖಲಿಸುವ ಮುನ್ನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.




