February 2, 2026

ಕುಳಾಲು :79 ನೇ ಸ್ವಾತಂತ್ರ್ಯೋತ್ಸವ ಹಾಗೂ ಶಾಲಾ ವಾಹನದ ಹಸ್ತಾಂತರ ಸಮಾರಂಭ

0
image_editor_output_image971790230-1755311106774


ಕುಳಾಲು : ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದಾಗ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿದೆ.ಈ ನಿಟ್ಟಿನಲ್ಲಿ ಕುಳಾಲು ಶಾಲೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಶಾಲಾ ವಾಹನವನ್ನು ಒದಗಿಸಿಕೊಡಲಾಗಿದೆ ಎಂದು ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ ರಾಜ ಬಿ.ಎಸ್ ಹೇಳಿದರು.

ಅವರು ಬ್ಯಾಂಕಿನ ವತಿಯಿಂದ ಕೊಡಮಾಡಲ್ಪಟ್ಟ ಶಾಲಾ ವಾಹನವನ್ನು ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ) ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ ಕುಳಾಲು ಶಾಲೆಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು , ಅದರ ಭಾಗವಾಗಿ ಕರ್ಣಾಟಕ ಬ್ಯಾಂಕಿನ ವತಿಯಿಂದ ಶಾಲಾ ವಾಹನವನ್ನು ಒದಗಿಸಿಕೊಟ್ಟಿರುವ ಬ್ಯಾಂಕಿನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಎಂ.ಆರ್.ಪಿ.ಎಲ್ ವತಿಯಿಂದ ಮಂಜೂರುಗೊಂಡ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ ಎಂದರು .ಮುಖ್ಯ ಅತಿಥಿಗಳಾಗಿ ಬ್ರೈಟ್ ಮಾರ್ಬಲ್ ಅಬುಧಾಬಿ ಇದರ ಮಾಲೀಕರಾದ ಶ್ರೀ ಇಬ್ರಾಹಿಂ, ಕರ್ಣಾಟಕ ಬ್ಯಾಂಕಿನ ಕುಡ್ತಮುಗೇರು ಶಾಖಾ ವ್ಯವಸ್ಥಾಪಕ ರಾದ ಶ್ರೀ ಉದಯಶಂಕರ್, ಆಗಮಿ ಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಶ್ರಫ್ ಕೆ ವಹಿಸಿದ್ದರು.

ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಜೀವಿ , ಶ್ರೀಮತಿ ಭಾಗೀರಥಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಆನಂದ ಪೂಜಾರಿ ಕುಳಾಲು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಶರೀಫ್.ಕೆ.ಎಚ್. ಉಪಾಧ್ಯಕ್ಷರಾದ ಶ್ರೀ ರಮೇಶ್ ಕಾಮತ್ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಎ ತಿಮ್ಮು ಸ್ವಾಗತಿಸಿದರು.ಸಹಶಿಕ್ಷಕ ಶ್ರೀ ತೌಸೀಫ್ ಆಹ್ಮದ್ ಧನ್ಯವಾದಗೈದರು.ಸಹಶಿಕ್ಷಕರಾದ ಶ್ರೀ ಹೇಮ ಎಂ.ಟಿ , ಶ್ರೀ ಕರಿಸಿದ್ದಪ್ಪ ಕಳ್ಳೆಪ್ಪನವರ್ , ಸಹಶಿಕ್ಷಕಿಯರಾದ ಶ್ರೀಮತಿ ಸವಿತಾ ರೈ , ಶ್ರೀಮತಿ ಪ್ಲೇವಿಯನ್ ಡಿ ಸೋಜ , ಶ್ರೀಮತಿ ಡೆಸಿನಾ ಡಿ ಸೋಜ ಸಹಕರಿಸಿದರು.ಸಹಶಿಕ್ಷಕ ಶ್ರೀ ಪರಮೇಶ್ವರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!