February 2, 2026

ಕೊರಿಂಗಿಲ ಜುಮಾ ಮಸೀದಿಯಲ್ಲಿ  79ನೇ ಸ್ವಾತಂತ್ರ್ಯ ದಿನಾಚರಣೆ

0
image_editor_output_image-1177996594-1755270600002

ಪುತ್ತೂರು/ಬೆಟ್ಟ0ಪಾಡಿ : ಕೊರಿಂಗಿಲ ಜುಮಾ ಮಸೀದಿ,ಮಿಸ್ಬಾಹುಲ್ ಹುದಾ ಮದ್ರಸ ವಠಾರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ kunhi ಹಾಜಿಯವರು ಧ್ವಜಾರೋಹಣಗೈದರು.
*ಖತೀಬರಾದ ಬಹು| ಅಯ್ಯುಬ್ ವಹಬಿ ಉಸ್ತಾದರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿ ತ್ಯಾಗ ಮಾಡಿದವರ ಬಗ್ಗೆ ಸಂದೇಶ ಭಾಷಣ ನೀಡಿದರು.

ಜಮಾತ್ ಕಮಿಟಿಯ ಸದಸ್ಯರು,ಜಮಾತ್ ಸದಸ್ಯರು, ಪೋಷಕರು, ಅಶ್ಬಾಲುಲ್ ಇಸ್ಲಾಂ ವೆಲ್ಫೇರ್ ಅಸೋಸಿಯೇಷನ್& MISA ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆ ಗಳಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ M.I.S.A ವತಿಯಿಂದ ಬಹುಮಾನ ವಿತರಣೆ ಹಾಗೂ ಎಲ್ಲರಿಗೂ ಸಿಹಿತಿಂಡಿ  ವಿತರಿಸಲಾಯಿತು.

ಮದ್ರಸ ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ದೇಶ ಭಕ್ತಿ ಗೀತೆ ನಡೆಯಿತು.

ಲತೀಫ್ ಗುಂಡ್ಯಡ್ಕ ಕಾರ್ಯಕ್ರಮ ನಿರೂಪಿಸಿ ಅಬೂಬಕ್ಕರ್ ಮದನಿ ಉಸ್ತಾದರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!