ಅಳಿಕೆ ಚೆಂಡುಕಳ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಚೆಂಡುಕಳ ಅಂಗನವಾಡಿ ಕೇಂದ್ರದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು.
ಧ್ವಜಾರೋಹಣ ವನ್ನು ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿಯವರು ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಕೃಷಿ ಪತ್ತಿನ ಸಹಕಾರಿ ಸಂಘ ದ ನಿರ್ದೇಶಕರಾದ ಗೀತಾಲತಾ ಟಿ ಶೆಟ್ಟಿ ಆಗಮಿಸಿದ್ದರು. ಪಂಚಾಯತ್ ಸದಸ್ಯರಾದ ಸೀತಾರಾಮ ಶೆಟ್ಟಿ, ಶಾಂಭವಿ, ರವಿಶ ಕೆ ಉಪಸ್ಥಿತಿ ಇದ್ದರು, ಪ್ರಮುಖರಾದ ಬಾಲಕೃಷ್ಣ ಪೂಜಾರಿ, ಮಮತಾ, ವಿರೂಪಾಕ್ಷ,ಅಂಗನವಾಡಿ ಕಾರ್ಯಕರ್ತೆ ವನಿತಾ, ಸಹಾಯಕಿ ಜಯಂತಿ, ಮಕ್ಕಳ ಪೋಷಕರು, ಅಂಗನವಾಡಿ ಮಕ್ಕಳು ಮತ್ತು ಊರವರು ಉಪಸ್ಥಿತರಿದ್ದರು.




