ಸ್ವಾಭಿಮಾನ ಭಾರತದ ಸ್ವಾತಂತ್ರ್ಯ ಉತ್ಸವ
ಬರಹ: ರಾಧಾಕೃಷ್ಣ ಎರುಂಬು: ಕ್ಷಣ ಗಣನೆಯಲ್ಲೇ 78ರ ಹರೆಯ ಮುಗಿಸಿದ ಸ್ವತಂತ್ರ ಭಾರತದ 79 ನೇ ಸಂಭ್ರಮದ ಉತ್ಸವ. ದೇಶದ ಉದ್ದಗಲವೂ ದಾಸಿ ಪ್ರವೃತ್ತಿ ಮೆರೆದ ಬ್ರಿಟಿಷ್ ಸಾಮ್ರಾಜ್ಯದ ದಾಸ್ಯದ ತೋಳಿನಿಂದ ಸರಿದು ನಮ್ಮದೇ ಆದ ಸಂವಿಧಾನಕ್ಕೆ ರೂಪು ಕೊಡಲು ಸಜ್ಜಾದ 1947ರ ವರ್ಷವಂತೂ ಸಂಭ್ರಮವೆ. ಹೋರಾಟದಲ್ಲಿ ರಕ್ತ ಸಿಕ್ತ ಅನುಭವ ಪಡೆದ ವೀರ ನಾಯಕರ ಬಿಸಿ ರಕ್ತದ ಏರನ್ನು ಸಾವಧಾನವಾಗಿಸಿದ ಆ ದಿನದಲ್ಲೊಮ್ಮೆ ನಾವು ನಿಂತು ನೋಡೋಣ. ಆಗ ನಮಗೆ ಅರ್ಥವಾಗುತ್ತದೆ ಇಂದು ಹಂಚುವ ಸಿಹಿ ತಿನಿಸುಗಳ ಪ್ರಾಮುಖ್ಯತೆ.
ನಿಮಗನಿಸುವುದಿಲ್ಲವೇ ಈಗ ನಾವೆಷ್ಟು ಬದಲಾಗಿದ್ದೇವೆ.
ನಮ್ಮ ಹುಮ್ಮಸ್ಸು ತಣಿದು ಮತ್ತೆ ನಮಗೆ ಹಮ್ಮು ಬಂದಂತಿದೆಯೇ ಅನಿಸುತಿದೆ. ಸಾಮರಸ್ಯದ ಹಾದಿ ತುಳಿಯದೆ ಸಮರಕ್ಕೆ ಅಣಿಯಾದಂತಿದೆ ಪ್ರಜಾರಂಜಕರ ಬದುಕು ಅಲ್ಲವೇ? ನಮ್ಮವರನ್ನೇ ಪರಕೀಯರoತೆ ನಡೆದುಕೊಳ್ಳುತ್ತಾ, ಸ್ವದೇಶೀ ಪ್ರೇಮಕ್ಕೆ ದಕ್ಕೆ ತರುವಂತಿದೆ ಆಧುನಿಕ ಜನ ಜನಿತ. ಸ್ವಾಸ್ತ್ಯ ಬದುಕಿಗೆ ಪ್ರಜಾ ಪ್ರಭುತ್ವದ
ಮುನ್ನಡೆ ಅಡ್ಡಿ ಪಡಿಸುತಿದೆ ಅನಿಸುತಿದೆ. ಆರೋಗ್ಯ, ತಂತ್ರಗಾರಿಕೆ, ವಿಜ್ಞಾನ, ಕೃಷಿ ಬದುಕಿನಲ್ಲಿ ಕ್ರಾಂತಿ, ಕೈಗಾರಿಕೆಯಲ್ಲಿ ಮುನ್ನಡೆ, ಸೇವಾ ಸೌಲಭ್ಯಗಳಿಗೆ ನೀಡುವ ಪ್ರೋತ್ಸಾಹ ನಮ್ಮ ಜನ ಮಾನಸದ ಜೀವನ ಗುಣಮಟ್ಟ ಹೆಚ್ಚಿಸಿದೆ.
ಜೀವಬಲ ತುಂಬುವ ರೈತ, ದೇಶ ಕಾಯುವ ಯೋಧರ ಬಲ ನಮ್ಮನ್ನೆಲ್ಲ ನಿರಾಳ ಬದುಕು ಬದುಕುವ ಯೋಗ ಕೊಟ್ಟಿದೆ. ಯುವ ಜನತೆ ಸ್ವಾಭಿಮಾನದ ಬದುಕು ಬದುಕುವ ಪಣ ಸ್ವಾತಂತ್ರ್ಯದ ಸಂಭ್ರಮ ಹೀಗೆ ಮುಂದುವರೆಯುವಂತೆ ಖಂಡಿತ ಮಾಡುತ್ತದೆ. ಹೊರದೇಶಗಳ ಅವಲಂಬನೆ ಪ್ರಗತಿಯ ಹಿನ್ನಡೆಗೆ ಹೇತುವಾಗುವುದು. ನಮ್ಮೊಳಗೆ ನಾವು ಸ್ವತಂತ್ರರಾಗೋಣ.
ನಾಳಿನ ಬಾಳಿನ ಪ್ರಜ್ಞೆ ಇರಿಸಿ ಮುಂದಡಿಯಿಡೋಣ. ಇಂದಿನ ಮಕ್ಕಳೇ ಮುಂದಿನ ಜನಾಂಗವಾದ್ದರಿಂದ ಮಕ್ಕಳಿಗೆ ಒಂದಷ್ಟು ಸ್ವಾತಂತ್ತ್ರೋತ್ಸವದ ಸವಿ ಮತ್ತು ಮಾಹಿತಿ ನೀಡೋಣ. ನಮ್ಮ ಪೂರ್ವಜರು ತೋರಿಸಿದ ಪರಂಪರೆ, ಸಂಸ್ಕಾರಕ್ಕೆ ಒತ್ತು ನೀಡೋಣ. ಸನಾತನತೆಯ ಮುಖ್ಯ ತಿರುಳಾದ ಒಳ್ಳೆಯ ಉತ್ತಮತೆ ವಿಶ್ವದ ಎಲ್ಲಾ ಕಡೆಗಳಿಂದ ಬರುತ್ತವೆ,ಪಡೆಯಬೇಕಷ್ಟೆ. ಎಂಬುದನ್ನು ಉಳಿಸೋಣ. ಸ್ವತಂತ್ರ್ಯ ಬದುಕನ್ನು ಸಂಭ್ರಮಿಸೋಣ.ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು.
️ *ರಾಧಾಕೃಷ್ಣ ಎರುಂಬು, ಉಪನ್ಯಾಸಕರು”ರಾಮ್ದೇವ್”ವಿಟ್ಲ.*




