ಉಡುಪಿ: ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡದ ತಾಮ್ರದ ಪೈಪ್ ಕಳ್ಳತನ: ಇಬ್ಬರು ಆರೋಪಿಗಳ ಬಂಧನ
ಉಡುಪಿ: ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡದ ತಾಮ್ರದ ಪೈಪ್ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು ಮೂಲದ ಮಹಮ್ಮದ್ ಜಾವೀದ್ (29), ತುಮಕೂರು ಮೂಲದ ಸಯ್ಯದ್ ದಾದಾ ಪಿರ್ @ ಲಿಯಾಕತ್ (28) ಬಂಧಿತ ಆರೋಪಿಗಳು.
ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಅಜ್ಜರಕಾಡಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆಗೆ ಆಕ್ಸಿಜನ್ ಪೈಪ್ ಲೈನ್ ಜೋಡಣೆಗೆ ಸ್ಟೋರೂಮ್ ನಲ್ಲಿಟ್ಟಿದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್ ಕಳ್ಳತನವಾಗಿರುವ ದೃಶ್ಯ ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಲಿಯಾಖತ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಸ್ಟೋರ್ ರೂಮಿನಲ್ಲಿಟ್ಟಿದ್ದ ಸುಮಾರು 8 ಲಕ್ಷ ಮೌಲ್ಯದ ಸೊತ್ತುಗಳಾದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್ ಗಳನ್ನು ಕಾರಿನಲ್ಲಿ ತುಂಬಿಕೊಂಡು ಕಳವು ಮಾಡಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.




