ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣ: ಎಸ್ಐಟಿ ಕಚೇರಿಗೆ ಬಂದ ಮತ್ತಿಬ್ಬರು ದೂರುದಾರರು
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಘಟನೆಯ ಬಗ್ಗೆ ಇಬ್ಬರು ಹೊಸ ದೂರುದಾರರು ಎಸ್.ಐ ಟಿ ಕಚೇರಿಗೆ ಆಗಮಿಸಿದ್ದಾರೆ.
ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪುರಂದರ ಗೌಡ ಹಾಗೂ ತುಲಾರಾಮ ಗೌಡ ಅವರು ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ.
ಪುರಂದರ ಗೌಡ ಹೇಳಿದ್ದೇನು? ಎಸ್.ಐ.ಟಿ ಕಚೇರಿಗೆ ಆಗಮಿಸುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪುರಂದರ ಗೌಡ, ನೇತ್ರಾವತಿ ಸ್ನಾನಘಟ್ಟದಲ್ಲಿ ನನ್ನ ಅಂಗಡಿಯಿತ್ತು. ಅಲ್ಲಿದ್ದ ವೇಳೆ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿದ್ದೇನೆ. ಇದೇ ವ್ಯಕ್ತಿ ಇರಬಹುದು ಅಂತ ಅನಿಸುತ್ತಿದೆ. ಒಂದಕ್ಕಿದ ಹೆಚ್ಚು ಜನರು ಸೇರಿ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿದ್ದೇವೆ. ಸಾಕ್ಷಿ ದೂರುದಾರ ತೋರಿಸಿದ ಒಂದನೆಯ ಸ್ಥಳದಲ್ಲಿ ಹಾಗೂ 13ನೆಯ ಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.




