March 18, 2026

ಬಂಡೀಪುರ ಕಾಡಾನೆ ದಾಳಿಯಿಂದ ಬಚಾವ್ ಆದ ವ್ಯಕ್ತಿಯ ಬಂಧನ: 25 ಸಾವಿರ ರೂ. ದಂಡ ಹಾಕಿದ ಅರಣ್ಯ ಇಲಾಖೆ

0
image_editor_output_image-1936362641-1754980027494.jpg

ಮೈಸೂರು: ಕಾಡಾನೆಯ ಎದುರು ಸೆಲ್ಪಿ ತೆಗೆದುಕೊಳ್ಳುಲು ಹೋಗಿ ಕಾಡಾನೆ ದಾಳಿಯಿಂದ ಸ್ವಲ್ಪದರಲ್ಲೇ ಬಚಾವ್ ಆದ ವ್ಯಕ್ತಿಯನ್ನು ಪೊಲೀಸರು ಹುಡುಕಿ ಆತನ ಅರೆಸ್ಟ್ ಮಾಡಿ ಅವನ ಮೇಲೆ 25 ಸಾವಿರ ರೂಪಾಯಿ ದಂಡ ಹಾಕಿದೆ.

ಬಂಧಿತನನ್ನು ನಂಜನಗೂಡಿನ ನಿವಾಸಿ ಬಸವರಾಜ್ ಎಂದು ಗುರುತಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದುಹೋಗಿರುವ ಕೆಕ್ಕನಹಳ್ಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆನೆ ದಾಳಿಯಿಂದ ಗಾಯಗೊಂಡು ಪರಾರಿಯಾಗಿದ್ದ ಆರೋಪಿಯನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು 25,000 ರೂ ದಂಡ ವಿಧಿಸಿ ಮಾತ್ರವಲ್ಲದೆ ತಪ್ಪೊಪ್ಪಿಗೆ ಪತ್ರ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!