ಕೊಡಂಗಾಯಿ: ಮುಹ್ಯದ್ದೀನ್ ಜುಮಾ ಮಸೀದಿಯ ನೂತನ ಪೋಷಕ ಸಮಿತಿ ರಚನೆ: ಅಧ್ಯಕ್ಷರಾಗಿ ಹಮೀದ್ ಟಿ ಆಯ್ಕೆ
ಕೊಡಂಗಾಯಿ: ಮುಹ್ಯದ್ದೀನ್ ಜುಮಾ ಮಸೀದಿ ಕೊಡಂಗಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿಯುವ ಸಿರಾಜುಲ್ ಇಸ್ಲಾಂ ಮದ್ರಸ (ಎಸ್,ಕೆ, ಐ, ಎಂ, ವಿ, ಬಿ-7386)
ಮದ್ರಸತ್ತುನ್ನೂರಿಯ ಕೊಡಂಗಾಯಿ,
ಸಂಶುಲ್ ಹುದಾ ಮದ್ರಸ ರಾಧುಕಟ್ಟೆ
ಇದರ ವಿದ್ಯಾರ್ಥಿಗಳ ಪೋಷಕರ ವಿಶೇಷ ಸಭೆಯು ಮುಹ್ಯದ್ದೀನ್ ಜುಮಾ ಮಸೀದಿ ಕೊಡಂಗಾಯಿ ಇದರ
ಅಧ್ಯಕ್ಷರಾದ ಜ| ಅಬ್ದುಲ್ ಕುಂಞ ಮೂರ್ಜೆಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರಗಿತು ಸಭೆಯಲ್ಲಿ ಕೋಶಾಧಿಕಾರಿ ಇಸ್ಮಾಯಿಲ್ ಮುಸ್ಲಿಯಾರ್ ನೆಡ್ಯಾಳ ಸ್ವಾಗತಿಸಿದರು.
ಎಂ ಜೆ ಎಂ ಖತೀಬರಾದ ಬಹು| ಬಿ ಎ ಸಿದ್ದೀಕ್ ಅರ್ಷದಿ ಉಸ್ತಾದರು ಧುಆಹ್ ಮೂಲಕ ಉದ್ಘಾಟಿಸಿ ಮದ್ರಸ ಶಿಕ್ಷಣವನ್ನು ಆಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಹೊಸ ಆವಿಷ್ಕಾರದೊಂದಿಗೆ ನಡೆಸಲು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮಾಡಿದಂತಹ ಮಾರ್ಪಾಡುಗಳ ಬಗ್ಗೆ ಪ್ರಾಸ್ತಾವಿಕವಾಗಿ ವಿವರಿಸಿದರು.
ಜಮಾಅತ್ ಪದಾಧಿಕಾರಿಗಳು ಹಾಗೂ ಪೋಷಕರು ಬಾಗವಹಿಸಿದ ಸಭೆಯಲ್ಲಿ ನೂತನ ಪೋಷಕ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಹಮೀದ್ ಟಿ,
ಪ್ರದಾನ ಕಾರ್ಯದರ್ಶಿಯಾಗಿ ಸಮೀರ್ ರಾಧುಕಟ್ಟೆ,
ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್ ಟಿಪ್ಪುನಗರ,
ಸಂಘಟನಾ ಕಾರ್ಯದರ್ಶಿಯಾಗಿ ಅಝ್ಹರುದ್ದೀನ್ ಕೊಡಂಗಾಯಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಎಂ ಜೆ ಎಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಿ ಎಚ್ ಕಾರ್ಯಕ್ರಮ ನಿರೂಪಿಸಿ ಜೊತೆ ಕಾರ್ಯದರ್ಶಿ ರಫೀಕ್ ಪಿ ವಂದಿಸಿದರು.




