March 18, 2026

ಲಯನ್ಸ್ ಸಂಸ್ಥೆ 317D: ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸುವ ನಾಮಫಲಕ ಉದ್ಘಾಟನೆ

0
image_editor_output_image-653210258-1754580339168

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಡಿ ಇದರ ವತಿಯಿಂದ ರಸ್ತೆ ಸುರಕ್ಷತೆಯ ಜಾಗೃತಿಯನ್ನು ಮೂಡಿಸುವಂತಹ ನಾಮಫಲಕ ಹೋರ್ಡಿಂಗ್ ಅನ್ನು ಸಂಚಾರಿಪೂರ್ವ ಪೊಲೀಸ್ ಠಾಣೆ ಕದ್ರಿ ಮುಂಭಾಗದಲ್ಲಿ  ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ ಶೆಣೈ ಅವರು ಉದ್ಘಾಟಿಸಿದರು,

ಲಯನ್ಸ್ ಜಿಲ್ಲಾ ಚೀಫ್ ಇಮೇಜ್ ಬಿಲ್ಡಿಂಗ್ ಕಾರ್ಡಿನೇಟರ್ ಲಯನ್ ಜಿ ಪ್ರಶಾಂತ್ ಪೈ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ನಜ್ಮಾ ಫಾರೂಕಿ ಎಸಿಪಿ ಮಂಗಳೂರು ನಗರ ಪೊಲೀಸ್ ಇವರು ಮಾತನಾಡಿ ಅಪಘಾತ ರಹಿತ ಸುಗಮ ಸಂಚಾರಕ್ಕೆ ರಸ್ತೆ ಸುರಕ್ಷತೆಯ ನಿಯಮಗಳ ಅರಿವನ್ನು ಮೂಡಿಸುವ ಲಯನ್ಸ್ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು,

ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಜಯರಾಜ್, ಜಿಲ್ಲಾ ಸಂಪುಟದ  ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ, ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್, ಡಿಜಿ ಪ್ರೊಗ್ರಾಮ್ ಹರೀಶ್ ಆಳ್ವ, ಜಿಲ್ಲಾ ಶಾಶ್ವತ ಯೋಜನೆಯ ಸಂಚಾಲಕಿ ಜಿ ಪೂಜಾ ಪೈ, ಪ್ರಾಂತಿಯ ಅಧ್ಯಕ್ಷರಾದ ವಿದ್ಯಾ ಕಾಮತ್, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷರಾದ ಸಂಜೀವ್ ಗೌಡ,ಕಾರ್ಯದರ್ಶಿ ಸ್ಮಿತಾ ಮಹೇಶ್,ಕೋಶಾಧಿಕಾರಿ ಮಾಲಾ ಕಿಶೋರ್,ಅನಿಲ್ ಕುಮಾರ್ ವೆಂಕಟೇಶ್ ಹೆಬ್ಬಾರ್, ಮಂಜುಳಾ ಶೆಟ್ಟಿ, ವಿನೋದ್ ರಾವ್, ಸುಜಿತ್ ಕುಮಾರ್ ,ಜಗದೀಶ್ ಪೈ, ರತ್ನಾಕರ್,  ಸುಬ್ರಹ್ಮಣ್ಯ,ರಾಮ ಮುಗ್ರೋಡಿ ಮತ್ತಿತರ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!