March 19, 2026

ಮಲಯಾಳಂ ಚಿತ್ರರಂಗದ ನಟ ಶಾನವಾಸ್ ನಿಧನ

0
image_editor_output_image1525331499-1754384781322.jpg

ಮಲಯಾಳಂ ಚಿತ್ರರಂಗದ ಖ್ಯಾತ ನಟ, ಎವರ್‌ಗ್ರೀನ್ ಹೀರೋ ಪ್ರೇಮ್‌ ನಜೀರ್ ಅವರ ಪುತ್ರ ಮತ್ತು ನಟ ಶಾನವಾಸ್ ನಿಧನರಾಗಿದ್ದಾರೆ.

ಶಾನವಾಸ್(71) ಸೋಮವಾರ (ಆ.4) ರಾತ್ರಿ ಕೇರಳದ ತಿರುವನಂತಪುರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಾಲಿವುಡ್ ಚಿತ್ರರಂಗ ಹಾಗೂ ಕಿರುತೆರೆ ಲೋಕದಲ್ಲಿ ಶಾನವಾಸ್‌ ಅಭಿನಯಿಸಿದ್ದರು. ಬಾಲಚಂದ್ರ ಮೆನನ್ ನಿರ್ದೇಶನದ ‘ಪ್ರೇಮಗೀತಾಂಗಳ್’ ಮೂಲಕ ಚಿತ್ರರಂಗಕ್ಕೆ ಅವರು ಕಾಲಿಟ್ಟಿದ್ದರು.

ಅವರು ನಟಿಸಿದ ಪ್ರಮುಖ ಚಿತ್ರಗಳು ‘ಮಣಿತಾಳಿ’, ‘ಗಾನಂ’, ‘ಹಿಮಂ’, ‘ಚೈನಾ ಟೌನ್’, ‘ಚಿತ್ರಂ’ ಮತ್ತು ಕೋರಿತರಿಚ ನಾಲ್ ಸೇರಿವೆ.

ಸುಮಾರು ಇಪ್ಪತ್ತೈದು ಚಿತ್ರಗಳಲ್ಲಿ ನಾಯಕನಾಗಿ ಮತ್ತು ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದರು. ಹಲವಾರು ದೂರದರ್ಶನ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಟನ ನಿಧನಕ್ಕೆ ಮಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!