March 18, 2026

ವಿಟ್ಲ: ಲೀಡರ್ಸ್ ಸಂಗಮ ಸ್ವಾಗತ ಸಮಿತಿ ರಚನೆ

0
image_editor_output_image-1020724214-1754043984197

ವಿಟ್ಲ: ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ಇದರ ವತಿಯಿಂದ ಇತ್ತೀಚೆಗೆ ದಾರುನ್ನಜಾತ್ ಪಿಕೆ ಉಸ್ತಾದ್ ಸ್ಮಾರಕ ಭವನದಲ್ಲಿ ಲೀಡರ್ಸ್ ಸಂಗಮ ಜರಗಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ 15ನೇ ವಾರ್ಷಿಕ ಹಾಗೂ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಅವರ 6ನೇ ಆಂಡ್ ನೇರ್ಚ್ ತಾರೀಕು ಅಗೋಸ್ಟ್ 27 ರಂದು ನಡೆಯುವ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು.

ನಿರ್ದೇಶಕರಾಗಿ ಖಾಝಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್, ಅಸಯ್ಯದ್ ಕುಂಬೋಲ್ ಆಟಕ್ಕೋಯ ತಂಙಳ್, ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಅಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ, ಮಹಮ್ಮದ್ ಫೈಝಿ ವಾಲೆಮುಂಡೋವು ಉಸ್ತಾದ್, ಎಂ ಎಸ್ ಮೊಹಮ್ಮದ್, ಮೊಹಮ್ಮದ್ಅಲಿ ಸಖಾಫಿ, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ, ಅಬೂಬಕ್ಕರ್ ಹಾಜಿ ಹೊಸಂಗಡಿ, ಡಾ ಹಸೈನಾರ್ ಟಿಪ್ಪು ನಗರ, ಹಸೈನಾರ್ ಮುಸ್ಲಿಯಾರ್ ಬಾರೆಬೆಟ್ಟು, ಸ್ವಾಗತ ಸಮಿತಿ ಅಧ್ಯಕ್ಷರಾಗಿ,ಅಬ್ದುಲ್ ಹಕೀಮ್ ಶಾಂತಿನಗರ, ಉಪಾಧ್ಯಕ್ಷರಾಗಿ
ಶಾಕಿರ್ ಅಳಕೆ ಮಜಳ್, ಇಕ್ಬಾಲ್ ಶೀತಲ್ ವಿಟ್ಲ, ಖಾಸಿಂ ಸಖಾಫಿ ಕೊಳಂಬೆ, ಅಬೂಬಕ್ಕರ್ ನೆಲ್ಲಿಗುಡ್ಡೆ, ಇಬ್ರಾಹಿಂ ಮೋನು ಟಿಪ್ಪು ನಗರ, ಉಸ್ಮಾನ್ ಸಖಾಫಿ, ಜನರಲ್ ಕನ್ವೀನರ್ ಅಬ್ದುಲ್ ಖಾದರ್ ಫೈಝಿ.

ಕನ್ವೀನರ್ಗಳಾಗಿ: ರಹೀಂ ಸಖಾಫಿ, ಅಬ್ಬಾಸ್ ಮದನಿ, ಮುಸ್ತಫ ಕೋಡಪದವು, ಇಬ್ರಾಹಿಂ ಮುಸ್ಲಿಯಾರ್, ಕೋಶಾಧಿಕಾರಿಯಾಗಿ: ಯೂಸುಸ್ ಸಾಜ, ಸಂಚಾಲಕರಾಗಿ: ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಇವರನ್ನು ನೇಮಕ ಮಾಡಲಾಯಿತು. ಅಲ್ಲದೆ 101 ಸದಸ್ಯರ ಸಮಿತಿಯನ್ನು ಕೂಡ ರಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶೈಖುನಾ ವಾಲೆಮಂಡೋವ್ ಉಸ್ತಾದ್ ವಹಿಸಿದರು.

ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮವನ್ನು ಸ್ವಾಗತಿಸಿದರು. ಉದ್ಘಾಟನೆಯನ್ನು ಅಸಯ್ಯದ್ ಶಮೀಮ್ ತಂಙಳ್ ಟಿಪ್ಪು ನಗರ ನಿರ್ವಹಿಸಿದರು. ಅಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯ ವಿಷಯ ಮಂಡನೆ ನಡೆಸಿದರು. ಈ ಸಂದರ್ಭದಲ್ಲಿ ವಿಟ್ಲ ಸುನ್ನೀ ಕೋ ಆರ್ಡಿನೇಷನ್ ಅಧ್ಯಕ್ಷರಾದ ಇಬ್ರಾಹಿಂ ಮದನಿ, ಎಂ ಎಸ್ ಮೊಹಮ್ಮದ್, ಅಬೂಬಕ್ಕರ್ ನೆಲ್ಲಿಗುಡ್ಡೆ, ಇಕ್ಬಾಲ್ ಶೀತಲ್ ವಿಟ್ಲ, ಸಾಮಾಜಿಕ ಕಾರ್ಯಕರ್ತ ಶಾಕಿರ್ ಅಳಕ್ಕೆ ಮಜಳ್, SJM ಅಧ್ಯಕ್ಷರಾದ ಖಾಸಿಂ ಸಖಾಫಿ ಹಸೈನಾರ್ ಮುಸ್ಲಿಯರ್ ಬಾರೆಬೆಟ್ಟು, ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹಸೈನಾರ್, ಇಸ್ಮಾಯಿಲ್ ಹಾಜಿ ಸೌತ್ ಇಂಡಿಯನ್, SYS ವಿಟ್ಲ ಝೋನ್ ಅಧ್ಯಕ್ಷರಾದ ರಹಿಂ ಸಖಾಫಿ, ಡಾ ಹಸೈನಾರ್ ಟಿಪ್ಪು ನಗರ, KMJ ಅಧ್ಯಕ್ಷರಾದ ಇಬ್ರಾಹಿಂ ಮೋನು ಟಿಪ್ಪುನಗರ, ಇಬ್ರಾಹಿಂ ಮುಸ್ಲಿಯರ್ ಟಿಪ್ಪು ನಗರ, ಅಬ್ದುಲ್ ರಹಮಾನ್ ಶರಫಿ, ಶಿಹಾಬುದ್ದೀನ್ ಸಖಾಫಿ, ಸಿನಾನ್ ಸಖಾಫಿ ಟಿಪ್ಪು ನಗರ, ಉಮ್ಮರ್ ವಿಟ್ಲ, ಅಬೂಬಕ್ಕರ್ ಹಾಜಿ ಕಡಂಬು ಅಲ್ಲದೆ ಹಲವು ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಭಾಗವಹಿಸಿದರು. ಸ್ವಾಗತ ಸಮಿತಿ ಕನ್ವೀನರ್ ಅಬ್ದುಲ್ ಖಾದರ್ ಫೈಝಿ ಕೊನೆಯದಾಗಿ ಎಲ್ಲರಿಗೂ ವಂದನೆಯನ್ನು ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!