ಸುನ್ನಿ ಸಂಯುಕ್ತ ಜಮಾಅತ್ ವಿಟ್ಲ ವತಿಯಿಂದ ಜಮಾಅತ್ ಪ್ರತಿನಿಧಿ ಸಂಗಮ
ವಿಟ್ಲ: ಸುನ್ನೀ ಸಂಯುಕ್ತ ಜಮಾಅತ್ ಆಶ್ರಯದಲ್ಲಿ ಖಾಝಿ ಸುಲ್ತಾನುಲ್ ಉಲಮಾ ಉಸ್ತಾದ್ ನಿರ್ದೇಶನದಂತೆ ನೆಲ್ಲಿಗುಡ್ಡೆ ಮದರಸ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮವು ಸುನ್ನಿ ಸಂಯುಕ್ತ ಜಮಾಅತ್ ಕೋಶಾಧಿಕಾರಿ ಅಬೂಬಕ್ಕರ್ ನೆಲ್ಲಿಗುಡ್ಡೆ ಅಧ್ಯಕ್ಷತೆಯಲ್ಲಿ 30/7/2025 ರಂದು ಬುಧವಾರ ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ವಿಟ್ಲ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ನಡೆಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಸಿ ಮೊಹಮ್ಮದ್ ಫೈಝಿ ಉಸ್ತಾದ್ ನಡೆಸಿ ಮಾತನಾಡಿದ ಅವರು, ಸುಲ್ತಾನುಲ್ ಉಲಮಾ ಖಾಝಿ ಅವರ ನಿರ್ದೇಶನದಂತೆ ಮೊಹಲ್ಲಾಗಳನ್ನು ಸಬಲೀಕರಣಗೊಳಿಸಲು ಸುನ್ನಿ ಸಂಯುಕ್ತ ಜಮಾಅತ್ ಮೂಲಕ ಕಾರ್ಯಾಚರಿಸಿ ಉತ್ತಮ ಮೊಹಲ್ಲಾಗಳನ್ನಾಗಿ ಪರಿವರ್ತನೆ ಮಾಡಲು ಮುಂದಾಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿಷಯ ಮಂಡನೆ ನಡೆಸಿದ ಖ್ಯಾತ ಚಿಂತಕ ಅಬ್ದುಲ್ಲಾ ಸಾರ್ ಮಾತನಾಡಿ ಮೊಹಲ್ಲಾಗಳ ಆಡಳಿತ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಾಲೆಮುಂಡೋವ್ ಉಸ್ತಾದ್, ಜಿಎಂ ಉಸ್ತಾದ್, ಅಬೂಬಕ್ಕರ್ ಫೈಝಿ ಉಸ್ತಾದ್ ಸ್ಥಳೀಯ ಖತೀಬರಾದ ಉನೈಸ್ ಸಖಾಫಿ ವಿಟ್ಲ, ಎಸ್ ಜೆ ಎಂ ಅಧ್ಯಕ್ಷರಾದ ಖಾಸಿಂ ಸಖಾಫಿ, ಎಸ್ ಎಂ ಎ ವಿಟ್ಲ ರೀಜನಲ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಗೂ ಹಲವು ಮೊಹಲ್ಲಾಗಳ ಪ್ರತಿನಿಧಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಅಸಯ್ಯದ್ ಜಮಲುಲೈಲಿ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸುನ್ನಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸಖಾಫಿ ಎಲ್ಲರಿಗೂ ಕೊನೆಯದಾಗಿ ವಂದಿಸಿದರು.




