March 13, 2026

ರಾಡಾರ್ ಸಿಸ್ಟಮ್ ರೀತಿಯ ವೈಜ್ಞಾನಿಕ ಕ್ರಮ ಅನುಸರಿಸಿ ಸ್ಥಳ ಅಗೆಯಬೇಕೇ ಹೊರತು ದೂರುದಾರನ ಬೆರಳು ಸೂಚಕ ಕ್ರಮದ ಮೇಲಲ್ಲ

0
image_editor_output_image-819201715-1753945610793.jpg

ಬರಹ: ನವೀನ್ ಸೂರಿಂಜೆ

ಹತ್ತಿಪ್ಪತ್ತು ವರ್ಷದ ಹಿಂದೆ ಸಿಕ್ಕ ಸಿಕ್ಕ ಕಾಡು, ಪೊದೆಗಳ ಬಳಿ ಹೂತಿಟ್ಟ ಜಾಗವನ್ನು ಈಗ ಅಗೆಯುವಾಗ ಪೊಲೀಸರು ವೈಜ್ಞಾನಿಕ ಕ್ರಮ ಅನುಸರಿಸಬೇಕು‌. ರಾಡಾರ್ ಸಿಸ್ಟಮ್ ರೀತಿಯ ವೈಜ್ಞಾನಿಕ ಕ್ರಮ ಅನುಸರಿಸಿ ಸ್ಥಳ ಅಗೆಯಬೇಕೇ ಹೊರತು, ಪ್ರತ್ಯಕ್ಷದರ್ಶಿ/ದೂರುದಾರ/ಆರೋಪಿಯ ಬೆರಳು ಸೂಚಕ ಕ್ರಮದ ಮೇಲಲ್ಲ.

ತುಂಬಾ ಸರಳವಾಗಿ ಪ್ರಾಕ್ಟಿಕಲ್ ಆಗಿ ಯೋಚಿಸೋಣಾ. ಹಿರಿಯರ/ ಕುಟುಂಬಸ್ಥರ ಶ್ರಾದ್ದಾ ದಿನವೋ, ಅಲ್ ಸೋಲ್ಸ್ ಡೇ, ಕಬರ್ರ್ ಝಿಯಾರತ್ ದಿನ ಸ್ಮಶಾನಕ್ಕೆ ಭೇಟಿ ಕೊಡುವಾಗ ತಮ್ಮ ಹಿರಿಯರ ಸಮಾದಿಯನ್ನು ಹುಡುಕುತ್ತೇವೆ. ನಾವೇ ಶ್ರದ್ದಾ ಭಕ್ತಿಯಿಂದ ಮಾಡಿದ ಸಮಾದಿ ಸ್ಥಳ ನಮಗೇ ತಕ್ಷಣ ನೆನಪಾಗುವುದಿಲ್ಲ. ಅದು ಬಿಡಿ, ಬೆಂಗಳೂರಲ್ಲಿ ಹತ್ತು ಎಕರೆಯಲ್ಲಿ ಮಾಡಿದ ಲೇಔಟ್ ನಲ್ಲಿ 30*40 ಸೈಟನ್ನು ದುಡ್ಡು ಕೊಟ್ಟು ಖರೀಧಿಸಿ, ಮರುದಿನ ಕುಟುಂಬದವರಿಗೆ ಅದೇ ಸೈಟ್ ತೋರಿಸಲು ಇಡೀ ದಿನ ಲೇಔಟ್ ಸುತ್ತಬೇಕು. ಹೀಗಿರುವಾಗ ಯಾವ ಭಾವನೆಗಳೂ ಇಲ್ಲದೇ ರ‌್ಯಾಂಡಮ್ ಆಗಿ ಹತ್ತಾರು, ನೂರಾರು ಶವಗಳನ್ನು ಎಲ್ಲೆಂದರಲ್ಲಿ ಹೂತಿದ್ದನ್ನು 6 ಅಡಿ, 8 ಅಡಿಯಲ್ಲಿ ಅಗೆದು ಸರ್ಚ್ ಮಾಡುವುದು ಎಷ್ಟು ಸರಿ ? ಈಗಿರುವ ವೈಜ್ಞಾನಿಕ ಮಾಧರಿಯಲ್ಲಿ ಎಲ್ಲಾ ಸಾವುಗಳ, ಹೂತ ಪ್ರಕರಣಗಳ ತನಿಖೆ ಆಗಬೇಕಿತ್ತಲ್ಲವೇ ?

Leave a Reply

Your email address will not be published. Required fields are marked *

error: Content is protected !!