ಒಂಟೆಯ ಮೇಲೆ ಸವಾರಿ ಮಾಡಿ ಕೋವಿಡ್ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತೆ
ಬಾರ್ಮರ್: ದೇಶದ ಸರ್ವರಿಗೂ ಕೋವಿಡ್ ಲಸಿಕೆ ನೀಡುವ ಸಂಕಲ್ಪ ಮಾಡಿರುವ ಸರಕಾರದ ಉದ್ದೇಶಕ್ಕೆ ಆರೋಗ್ಯ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದು, ರಾಜಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತೆ ಒಂಟೆಯ ಮೇಲೆ ಸವಾರಿ ಮಾಡಿ ಲಸಿಕೆ ನೀಡುವ ಫೋಟೋವನ್ನು ಕೇಂದ್ರ ಆರೋಗ್ಯ ಸಚಿವ ಡಾ. ಮನ್ ಸುಖ್ ಮಾಂಡವೀಯ ಹಂಚಿಕೊಂಡು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

‘ಸಂಕಲ್ಪ ಮತ್ತು ಬದ್ಧತೆಯ ಸಂಯೋಜನೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಲಸಿಕೆ ಅಭಿಯಾನದ ಫೋಟೋಗಳು’ ಎಂದು ಸಚಿವ ಡಾ. ಮನ್ ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರಕಾರದ ಮಹತ್ವದ ‘ಹರ್ ಘರ್ ದಸ್ತಕ್’ ಲಸಿಕೆ ಅಭಿಯಾನದ ಭಾಗವಾಗಿ ಆರೋಗ್ಯ ಕಾರ್ಯಕರ್ತರು ಈಗಾಗಲೇ 120 ಕೋಟಿಗೂ ಹೆಚ್ಚು ಜನರನ್ನು ತಲುಪಿ ಲಸಿಕೆಗಳನ್ನು ನೀಡಿದ್ದಾರೆ.





