ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ: ಸಾಧನಶ್ರೀ ಪ್ರಶಸ್ತಿಗೆ ರಶೀದ್ ವಿಟ್ಲ ಆಯ್ಕೆ
ಮಂಗಳೂರು: ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೆಸಿಐ ವಲಯ 15ರ ವ್ಯವಹಾರ ಸಮ್ಮೇಳನ – 2025ರಲ್ಲಿ ನೀಡಲಾಗುವ “ಸಾಧನಶ್ರೀ” ಪ್ರಶಸ್ತಿಗೆ ವಿಟ್ಲ ಜೆಸಿಐಯ ಪೂರ್ವಾಧ್ಯಕ್ಷ ಹಾಗೂ ಕರಾವಳಿಯ ಸಮಾಜ ಸೇವಕ ರಶೀದ್ ವಿಟ್ಲ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಜೆಸಿಐ ಮಡಂತ್ಯಾರ್ ಆತಿಥ್ಯದಲ್ಲಿ ಜುಲೈ 27 ರಂದು ಜರಗುವ “ಮೃದಂಗ – ಸಾಧಕ ಜೆಸಿಗಳ ಸಾಧನೆಯ ತರಂಗ” ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




