March 13, 2026

ಕಾರ್ಕಳ: ಯಕ್ಷಗಾನ ಆಯೋಜಕರ ವಿರುದ್ಧ ದಾಖಲಾಗಿದ್ದ ದೂರಿಗೆ ಹೈಕೋರ್ಟ್‌ ತಡೆ

0
image_editor_output_image1105357759-1753287580700.jpg

ಕಾರ್ಕಳ: ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಎಂಬಲ್ಲಿ ಜ. 14ರಂದು ಶ್ರೀ ಈಶ್ವರ ಯಕ್ಷಗಾನ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಯಕ್ಷಗಾನ ಆಯೋಜನೆಗೆ ಪಂಚಾಯತ್‌ ಪಿಡಿಓ ಅವರಿಂದ ಹಾಗೂ ಧ್ವನಿವರ್ದಕ ಬಳಕೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಸ್ಥಳೀಯ ವ್ಯಕ್ತಿಯಿಂದ ದಾಖಲಾಗಿದ್ದ ದೂರಿಗೆ ಹೈಕೋರ್ಟ್‌ ತಡೆ ನೀಡಿದೆ.

ಶ್ರೀ ಈಶ್ವರ ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಅಜೆಕಾರು ಮಹಾಲಕ್ಷ್ಮೀ ಸೌಂಡ್ಸ್‌ ಮಾಲಕ ಅಪ್ಪು ನಾಯಕ್‌, ಮನೋಜ್‌ ಶೆಟ್ಟಿ, ಪ್ರಜ್ವಲ್‌ ಜೈನ್‌ ಹಾಗೂ ಆದರ್ಶ ಜೈನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಜು. 22ರಂದು ಹೈಕೋರ್ಟ್‌ ಪ್ರಕರಣಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ. ಹೈಕೋರ್ಟ್‌ನಲ್ಲಿ ನ್ಯಾಯವಾದಿ ಮಹೇಂದ್ರ ಎಸ್. ಎಸ್. ಬೆಂಗಳೂರು ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!