March 13, 2026

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಇನ್‌ವೆಸ್ಟಿಚರ್ ಸಮಾರಂಭ: ನ್ಯಾಯಬದ್ಧತೆ ಮತ್ತು ಸನ್ನಡತೆಯೊಂದಿಗೆ ನಾಯಕತ್ವ ಬೆಳೆಸಿಕೊಂಡರೆ ಭವಿಷ್ಯದಲ್ಲೂ ಉತ್ತಮ ನಾಯಕನಾಗಲು ಸಾಧ್ಯ: ಡಾ. ಗೀತಪ್ರಕಾಶ್

0
IMG-20250721-WA0008.jpg

ವಿಟ್ಲ: ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ನಡೆದ 2025–26ನೇ ಶೈಕ್ಷಣಿಕ ವರ್ಷದ ಇನ್‌ವೆಸ್ಟಿಚರ್ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಮಂಡಳಿಯ ಸದಸ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿ ವಿಟ್ಲ ಸುರಕ್ಷಾ ಆಸ್ಪತ್ರೆಯ ವೈದ್ಯರಾದ ಡಾ. ಗೀತಪ್ರಕಾಶ್ ಅಂಗರಕೊಡಿ ಅವರು ವಿದ್ಯಾರ್ಥಿಗಳಿಗೆ ನ್ಯಾಯಬದ್ಧತೆ ಮತ್ತು ಸನ್ನಡತೆಯೊಂದಿಗೆ ನಾಯಕತ್ವ ಬೆಳೆಸಿಕೊಂಡರೆ ಭವಿಷ್ಯದಲ್ಲೂ ಉತ್ತಮ ನಾಯಕನಾಗಲು ಸಾಧ್ಯ ಎಂದು ಮಕ್ಕಳಿಗೆ ಶುಭಾಶಯ ಕೋರಿದರು. ವಿದ್ಯಾರ್ಥಿಗಳಿಂದ ಪ್ರಸ್ತುತಪಡಿಸಲಾದ ಸೌಂದರ್ಯಮಯವಾದ ಸಮೂಹಗೀತೆ ಕಾರ್ಯಕ್ರಮಕ್ಕೆ ವಿಶೇಷ ರಂಗು ನೀಡಿತು.

ಇನ್ನೋರ್ವ ಅತಿಥಿ ಜಂಯ್ಯತುಲ್ ಫಲಾಹ್ ಬಂಟ್ವಾಳ ಅಧ್ಯಕ್ಷರಾದ ರಶೀದ್ ವಿಟ್ಲ ಅವರು ಉತ್ಸಾಹವರ್ಧಕ ಮಾತುಗಳ ಮೂಲಕ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ರವರು ಶಾಲಾ ಶಿಸ್ತಿನ ಮಹತ್ವವನ್ನು ಒತ್ತಿಹೇಳಿ, ವಿದ್ಯಾರ್ಥಿ ನಾಯಕತ್ವದ ಕುರಿತು ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ನಿರ್ದೇಶಕರು ಶ್ರೀ ನೌಶೀನ್ ಬದ್ರಿಯಾ ಹಾಗೂ ಶಾಲಾ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ರಿಮ್ಶಾ ಫಾತಿಮಾ ಮತ್ತು ಮರಿಯಂ ನಿಹಾ ಕಾರ್ಯಕ್ರಮ ನಿರೂಪಿಸಿದರು. ಶಂಝಿ ಫಾತಿಮಾ ಆತ್ಮೀಯವಾಗಿ ಸ್ವಾಗತ ಭಾಷಣ ನೀಡಿ, ಮೊಹಮ್ಮದ್ ಹಿಷಾಮ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!