March 13, 2026

ವಿಟ್ಲದಲ್ಲಿ Special Action Force (SAF) ನ ಪಥಸಂಚಲನ

0
IMG-20250719-WA0002.jpg

ವಿಟ್ಲ: ಸಮಾಜದ ಸ್ವಾಸ್ಥ್ಯ ಕೆಡಿಸುವ ಕೋಮು ಶಕ್ತಿಗಳ ನಿರ್ಮೂಲನಕ್ಕಾಗಿ ಎಸ್ ಎ ಎಫ್ ವಿಶೇಷ ಕಾರ್ಯಪಡೆಯನ್ನು ಪೋಲೀಸ್ ಇಲಾಖೆ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇತ್ತೀಚೆಗೆ ರಚಿಸಲಾಗಿತ್ತು. ಶನಿವಾರ ಸಂಜೆ ವಿಟ್ಲದಲ್ಲಿ Special Action Force (SAF) ನ ಪಥಸಂಚಲನ ನಡೆಯಿತು.

ಜನರಲ್ಲಿ ವಿಶೇಷ ಜಾಗೃತಿ ಮೂಡಿಸುವ ಸಲುವಾಗಿ ಎಸ್ ಎ ಎಫ್ ನಿಂದ ಪಥಸಂಚಲನ ಕಾರ್ಯಕ್ರಮ ನಡೆಯಿತು. ವಿಟ್ಲ ಠಾಣೆಯಿಂದ ಹೊರಟ ಪಥಸಂಚಲನವು ನಾಲ್ಕು ಮಾರ್ಗ, ಅಡ್ಡಬೀದಿಯಾಗಿ ವಿಟ್ಲದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.

ಎಸ್ ಎ ಎಫ್ ಸಬ್ ಇನ್ಸ್‌ಪೆಕ್ಟರ್ ನಿಜಲಿಂಗಪ್ಪ, ಸಿಂಗಣ್ಣ ಪಟೇಲ್ ವಿಟ್ಲ ಪೊಲೀಸ್ ಠಾಣಾ ಸಬ್ ಇನ್ಸ್‌ಪೆಕ್ಟರ್ ಗ ರತನ್ ಕುಮಾರ್, ಬಿ.ಎಸ್. ನಾಯಕ್ತ್ತು ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!