March 13, 2026

ಬೆಳ್ತಂಗಡಿ: ವಿವಾಹಿತ ಮಹಿಳೆ ತಾಯಿ ಮನೆಯಲ್ಲಿ ಆತ್ಮಹತ್ಯೆ

0
denzil_130725_ramya.jpg

ಬೆಳ್ತಂಗಡಿ: ವಿವಾಹಿತೆ ಮಹಿಳೆ ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜು. 12ರಂದು ನಡೆದಿದೆ.

ಕೊಯ್ಯೂರು ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ, ಕೊಯ್ಯೂರಿನ ದರ್ಖಾಸ್‌ನ ದೇವಪ್ಪ ಬಂಗೇರ ಅವರ ಪುತ್ರಿ ರಮ್ಯಾ (32) ಮೃತಪಟ್ಟವರು. ಜುಲೈ 13 ರಂದು ಮಧ್ಯಾಹ್ನ ಮನೆಯ ಒಂದು ಕೋಣೆಯಲ್ಲಿ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ರಮ್ಯಾ ಎರಡು ವರ್ಷಗಳ ಹಿಂದೆ ಕೊಯ್ಯೂರಿನ ಪದಡ್ಕ ನಿವಾಸಿ ಲತೀಶ್ ಅವರನ್ನು ವಿವಾಹವಾಗಿದ್ದರು. ಅವರು ಬೆಳ್ತಂಗಡಿಯ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ರಮ್ಯಗೆ ಅನಾರೋಗ್ಯ ಕಾಡುತ್ತಿದ್ದು, ತಾಯಿ ಮನೆಗೆ ಬಂದಿದ್ದ ರಮ್ಯಾ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಂದಾಯ ನಿರೀಕ್ಷಕ ಪ್ರತೀಶ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!