ಅರಂತೋಡು: ಗ್ರಾ.ಪಂಚಾಯತ್ ಘನ ತ್ಯಾಜ್ಯ ಶೇಖರಣ ಕೇಂದ್ರಕ್ಕೆ ಬೆಂಕಿ ಅವಘಡ
ಸುಳ್ಯ: ಅರಂತೋಡು ಗ್ರಾಮ ಪಂಚಾಯತ್ ಘನ ತ್ಯಾಜ್ಯ ಘಟಕಕ್ಕೆ ಜು.9ರಂದು ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಶೇಖರಣೆ ಇರಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಅರಂತೋಡು ಕೊಡೆಂಕೆರಿ ಯಲ್ಲಿ ನಡೆದಿದೆ.



ತ್ಯಾಜ್ಯ ಘಟಕದಲ್ಲಿ ಸಿಬ್ಬಂದಿಯವರು 5 ಗಂಟೆಗೆ ಕೆಲಸ ಮುಗಿಸಿ ತೆರಳಿದ ಕೆಲವೇ ಕ್ಷಣದಲ್ಲಿ ಬೆಂಕಿ ಆವರಿಸಿದೆ. ಘಟಕದಲ್ಲಿ ಹೊಗೆ ಅವರಿಸಿದನ್ನು ಕಂಡು ಅಕ್ಕ ಪಕ್ಕದ ಮನೆಯವರು ಘಟಕದ ಸಿಬ್ಬಂದಿಯವರಿಗೆ ಕರೆ ಮಾಡಿ ತಿಳಿಸಿದರು. ಆವಾಗಲೇ ಪ್ಲಾಸ್ಟಿಕ್ ತ್ಯಾಜ್ಯ ಗಳಿಗೆ ಬೆಂಕಿ ಆವರಿಸಿ ಉರಿಯುತ್ತಿತ್ತು. ಅದರ ಒಳಗಿರುವ ದಾಖಲೆ ಪತ್ರ,ಪಂಚಿಗ್ ಮಿಷನ್, ಗಡಿವಾಷ್ ಮಿಷನ್ ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಯಿತು. 9 ಗಂಟೆಯವರೆಗೆ ಬೆಂಕಿ ಉರಿಯುತ್ತಿತ್ತು ಎಂದು ತಿಳಿದು ಬಂದಿದೆ.
ನೂರಾರು ಜನರು ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ್ದು, ಘಟನಾ ಸ್ಥಳಕ್ಕೆ ಸುಳ್ಯ ತಾಲ್ಲೂಕು ಇ ಒ ರಾಜಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್, ಅರಂತೋಡು ತೋಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್, ದಯಾನಂದ ಕುರುಂಜಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ಪುಷ್ಪ ಮೆದಪ್ಪ, ಪಂಚಾಯತ್ ಸದಸ್ಯರಾದ ಮಾಲಿನಿ, ಗಂಗಾಧರ ಬನ,ಶಿವಾನಂದ ಕುಕ್ಕುಂಬಳ, ಕುಸುಮಾಧರ ಅಡ್ಕಬಳೆ, ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ಸ್ಥಳೀಯರು ಹಾಗೂ ಪೊಲಿಸ್ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿದರು.




