March 13, 2026

ವಿಟ್ಲ: ಖಾಸಗಿ ಬಸ್ಸಿನಿಂದ ರಸ್ತೆಗೆ ಬಿದ್ದು ಪ್ರಯಾಣಿಕ ಮೃತ್ಯು

0
image_editor_output_image1322531441-1752051808330.jpg

ವಿಟ್ಲ: ಖಾಸಗಿ ಬಸ್ಸಿನಿಂದ ಪ್ರಯಾಣಿಕರೊಬ್ಬರು ರಸ್ತೆಗೆ ಬಿದ್ದು ಮೃತ ಪಟ್ಟ ಘಟನೆ ವಿಟ್ಲ-ಮಂಗಳೂರು ರಸ್ತೆಯ ಬಾಕ್ರಬೈಲು ಸಮೀಪದ ಕುಡ್ತಮುಗೇರು ಎಂಬಲ್ಲಿ ಸಂಭವಿಸಿದೆ.

ಕೊಲ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ. ಚಿದಾನಂದ ರೈ ಅವರು ಜುಲೈ 7 ರಂದು ಸೋಮವಾರ ವಿಟ್ಲದಿಂದ ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಬಸ್ಸಿಗೆ ಕೊಡಂಗಾಯಿಯಲ್ಲಿ ಏರಿದ್ದರು.

ಕುಡ್ತಮುಗೇರು ನಿಲ್ದಾಣದಲ್ಲಿ ಅವರಿಗೆ ಇಳಿಯ ಬೇಕಾಗಿತ್ತು. ಕುಡ್ತಮುಗೇರು ಬಸ್ ತಂಗುದಾಣ ಸಮೀಪಿಸಿದಾಗ ಅವರು ಇಳಿಯಲು ಸನ್ನದ್ದರಾಗಿ ಬಸ್ಸಿನ ಮೆಟ್ಟಿಲಿನಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!