March 13, 2026

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಮಹಮ್ಮದ್ ಶಾಹಿಲ್ ವಿಟ್ಲ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0
IMG-20250622-WA0003.jpg

ವಿಟ್ಲ: ಜೂನ್ 28ರಿಂದ ಜುಲೈ 01ರವರೆಗೆ ಹರಿದ್ವಾರದ ರಾಣಿಪುರ್ ಮಾಡ ಬಳಿಯ ಶ್ರೀ ಪ್ರೇಮ್ ನಗರ್ ಆಶ್ರಯದಲ್ಲಿ ನಡೆಯಲಿರುವ 18ರ ವಯೋಮಿತಿಯ ಬಾಲಕರ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ವಿಟ್ಲ ಮಣ್ಣಿನಲ್ಲಿ ಅರಳಿದ ಚುರುಕಿನ ಕಬಡ್ಡಿ ಯುವ ಪ್ರತಿಭೆ ಮಹಮ್ಮದ್ ಶಾಹಿಲ್ ವಿಟ್ಲರವರು ಆಯ್ಕೆಯಾಗಿದ್ದಾರೆ.

ಇವರು ವಿಠಲ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿಠಲ ಎಜುಕೇಶನ್ ಸೊಸೈಟಿ ಹಾಗೂ ಪ್ರಾಂಶುಪಾಲರು, ಶಿಕ್ಷಕ – ಶಿಕ್ಷಕೇತರ ವರ್ಗ ತರಬೇತಿ ನೀಡಿರುವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಶ್ರೀಯುತ ಶ್ರೀನಿವಾಸ್ ಗೌಡ ನೆಕ್ಕಿಲಾರ್ ರವರು ಇವರ ಕ್ರೀಡಾ ಭವಿಷ್ಯವು ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!