March 15, 2026

ಉಕ್ಕುಡ ಜಮಾಅತ್ ಎನ್ನಾರೈ ಫಾರಂ ಅಧ್ಯಕ್ಷರಾಗಿ ಸಿರಾಜ್ ಮಹಮೂದ್

0
image_editor_output_image-581886156-1750525170274

ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಜಮಾಅತ್ ಗೊಳಪಟ್ಟ ಪ್ರವಾಸಿಗಳನ್ನು ಸೇರಿಸಿ ಉಕ್ಕುಡ ಜಮಾಅತ್ ಎನ್ನಾರೈ ಫಾರಂ ರಚಿಸಲಾಗಿದ್ದು, ನೂತನ ಪದಾಧಿಕಾರಿಗಳನ್ನು ಶುಕ್ರವಾರ (20-06) ವರ್ಚುವಲ್ ಸಭೆ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮಹಮೂದ್ ಸಿರಾಜ್ ಸೇರಾಜೆ (ಯಾಂಬು, ಸೌದಿ ಅರೇಬಿಯಾ), ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಫೋಕಸ್ ಬ್ರಾಣಪಾದೆ (ದಮಾಮ್), ಕೋಶಾಧಿಕಾರಿಯಾಗಿ ಸಲೀಮ್ ಉಕ್ಕುಡ (ಅಲ್ ಹಸ್ಸ, ಸೌದಿ ಅರೇಬಿಯಾ), ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ (ಮೋನು) ಆಲಂಗಾರು (ಅಬುದಾಬಿ), ಅಬ್ದುಲ್ಲ ಸರೋಳಿ (ಕತಾರ್), ಜೊತೆಕಾರ್ಯದರ್ಶಿಗಳಾಗಿ ಮಹಮ್ಮದ್ ಹನೀಫ್ ಗೋಲ್ಡ್ ಉಕ್ಕುಡ (ದುಬೈ, ಮಹಮ್ಮದ್), ಇರ್ಶಾದ್ ಬುಡಾಲ್ತಡ್ಕ (ಅಬುದಾಬಿ), ಕಾರ್ಯಕಾರೀ ಸಮಿತಿ ಸದಸ್ಯರಾಗಿ ಸಿರಾಜುದ್ದೀನ್ ಸರೋಳಿ (ಜುಬೈಲ್), ಇಬ್ರಾಹಿಂ ಮನ್ಸೂರ್ ಸರೋಳಿ (ಬಹರೈನ್), ಹುಸೈನ್ ಕಲ್ಲಂಗಳ (ದೋಹಾ), ಅಶ್ರಫ್ ಉಕ್ಕುಡ (ಅಬುದಾಬಿ), ಸಿರಾಜ್ ನೆಕ್ಕರೆಕಾಡು (ಅಬುದಾಬಿ), ರಾಝಿಕ್ ಉಕ್ಕುಡ (ಯುಎಇ) ಅವರನ್ನು ಆರಿಸಲಾಯಿತು. ನಿರ್ದೇಶಕರಾಗಿ ಜಮಾಅತ್ ಕಮಿಟಿ ಅಧ್ಯಕ್ಷ ಮುನೀರ್ ದರ್ಬೆ ಹಾಗೂ ಸದಸ್ಯ ರಶೀದ್ ವಿಟ್ಲ ಅವರನ್ನು ನೇಮಿಸಸಲಾಯಿತು.

ಉಕ್ಕುಡ ಜಮಾಅತ್ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಎನ್ಪಾರೈ ಸದಸ್ಯರಿದ್ದು, ಯುಎಇ, ಸೌದಿ ಅರೇಬಿಯಾ, ಕತಾರ್, ಬಹರೈನ್, ಒಮಾನ್, ಮಲೇಷಿಯಾ ರಾಷ್ಟ್ರಗಳಲ್ಲಿ ಪಸರಿಸಿದ್ದಾರೆ. ಅವರನ್ನೆಲ್ಲಾ ಒಂದೇ ವೇದಿಕೆಗೆ ತಂದು ಜಮಾಅತ್ ಅಭಿವೃದ್ಧಿ ದೃಷ್ಟಿಯಲ್ಲಿ “ಉಕ್ಕುಡ ಜಮಾಅತ್ ಎನ್ನಾರೈ ಫಾರಂ” ಅಸ್ತಿತ್ವಕ್ಕೆ ತರಲಾಗಿದೆ.

Leave a Reply

Your email address will not be published. Required fields are marked *

error: Content is protected !!