March 22, 2026

ಉಡುಪಿ: ಹೆಚ್ಚಾಗಿ ಮೊಬೈಲ್ ಉಪಯೋಗಿಸುತ್ತಿದ್ದ ಪತ್ನಿ: ಕೋಪದಿಂದ ಪತ್ನಿಯನ್ನು ಕತಿಯಿಂದ ಕಡಿದು ಹತ್ಯೆ

0
image_editor_output_image1374483482-1750407511783

ಬ್ರಹ್ಮಾವರ: ಪತ್ನಿ ಹೆಚ್ಚಾಗಿ ಮೊಬೈಲ್‌ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ಪತಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಕೊಲೆಗೀಡಾದವರನ್ನು ಹೊಸಮಠ ನಿವಾಸಿ ರೇಖಾ(27) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಆಕೆಯ ಪತಿ ಕೊಳಂಬೆ ಗ್ರಾಮದ ನಿವಾಸಿ ಗಣೇಶ ಪೂಜಾರಿ(42) ಎಂಬಾತನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಗಣೇಶ್‌ ಪೂಜಾರಿ ವಿಪರೀತ ಮಧ್ಯ ವ್ಯಸನ ಚಟವುಳ್ಳವನಾಗಿದ್ದ. ಪತ್ನಿ ಹೆಚ್ಚಾಗಿ ಮೊಬೈಲ್‌ ಉಪಯೋಗಿಸುತ್ತಾಳೆಂದು ಸಿಟ್ಟಿನಿಂದ ವಿಪರೀತ ಮಧ್ಯ ಸೇವನೆ ಮಾಡಿ ಗುರುವಾರ ರಾತ್ರಿ ಮನೆಯಲ್ಲಿ ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಗಣೇಶ್‌ ಪೂಜಾರಿಯನ್ನು ಬಂಧಿಸಿಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!