ಪೆರುವಾಯಿ: ಅಲ್ ಅಮೀನ್ ಪೆರುವಾಯಿ – ಯುಎಇ ಸಮಿತಿಯಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ
ಅಲ್ ಅಮೀನ್ ಪೆರುವಾಯಿ – ಯುಎಇ ಸಮಿತಿಯ
ಆಶ್ರಯದಲ್ಲಿ, 2025–26ನೇ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಮುಚಿರಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ ಆಯೋಜಿಸಲಾಯಿತು.
ಈ ಕಾರ್ಯಕ್ರಮದ ಮೂಲಕ 1 ರಿಂದ 7ನೇ ತರಗತಿವರೆಗಿನ 40 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.



ಈ ಸೇವಾ ಕಾರ್ಯವು ಶಾಲಾ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ಹಾಜಿ ಇಬ್ರಾಹಿಂ ಪಿ.ಎಂ ಅಧ್ಯಕ್ಷತೆಯನ್ನು ವಹಿಸಿದ್ದರು. ಸಿದ್ದಿಕ್ ಕಾನಾ ಸ್ವಾಗತ ಭಾಷಣ ಮಾಡಿದರು ಮತ್ತು ಶಾಫಿ ಮುಚಿರಪದವು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅತಿಥಿಗಳಾಗಿ ಹಮೀದ್ ದರ್ಕಷ್, ಹನೀಫ್ ಬಾಂದ್ರಾ, ಆಸಿಫ್ ಮುಚಿರಪದವು ಮತ್ತು ಶಾಕಿರ್ ಮುಚಿರಪದವು ಭಾಗವಹಿಸಿ ಮಕ್ಕಳ ವಿದ್ಯಾಭ್ಯಾಸದ ಮಹತ್ವದ ಬಗ್ಗೆ ಉತ್ತೇಜನದ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಅಧ್ಯಾಪಕಿ ಕುಮಾರಿ ಫಾತಿಮಾ ಮುಫೀದ ನಿರ್ವಹಿಸಿದರು. ಅವರು ತಮ್ಮ ಭಾಷಣದಲ್ಲಿ ಅಲ್ ಅಮೀನ್ ಸಮಿತಿಯ ಕಳೆದ 12 ವರ್ಷಗಳ ಸಮುದಾಯ ಸೇವೆಯನ್ನು ನೆನೆದು, ಸಮಿತಿಯ ನಿಷ್ಠೆ ಹಾಗೂ ಸೇವಾಭಾವನೆಯನ್ನು ಪ್ರಶಂಸಿಸಿದರು.
ಪುಸ್ತಕ ವಿತರಣೆಯ ವ್ಯವಸ್ಥೆಯನ್ನು ಸುಸೂತ್ರವಾಗಿ ನಿರ್ವಹಿಸಿದ ಸಿದ್ದಿಕ್ ಕಾನಾ ಅವರಿಗೆ ಸಮಿತಿಯಿಂದ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಶಿಸ್ತಿನ ಪಾಲ್ಗೊಳ್ಳುವಿಕೆ ಹಾಗೂ ಉತ್ಸಾಹದ ಹಾಜರಾತಿ ಕಾರ್ಯಕ್ರಮದ ಹಿರಿಮೆಗೆ ಮತ್ತೊಂದು ಮೆರುಗು ನೀಡಿತು.
ಕಾರ್ಯಕ್ರಮದ ಕೊನೆಗೆ ಮಕ್ಕಳಿಗೆ ಮತ್ತು ಭಾಗವಹಿಸಿದ್ದ ಎಲ್ಲರಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು, ಇದರಿಂದ ಮಕ್ಕಳಲ್ಲೂ ಸಂತೋಷ ಮತ್ತು ಉತ್ಸಾಹ ಹೆಚ್ಚಾಯಿತು.
ಯುಎಇಯಿಂದ ಅಲ್ ಅಮೀನ್ ಸಮಿತಿಯ ಅಧ್ಯಕ್ಷ ಹರೀಫ್ ಕುಂಬಲಕೊಡಿ, ಕಾರ್ಯದರ್ಶಿ ಹಮೀದ್ ದೈಗೊಳಿ ಹಾಗೂ ಸಮಿತಿಯ ಪದಾಧಿಕಾರಿ ತಂಡ ಈ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಂತೋಷ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ದಾನಿಗಳು ಮತ್ತು ಸಮಿತಿಯ ಸದಸ್ಯರಿಗೆ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಲಾಯಿತು.




