March 13, 2026

ಪುತ್ತೂರು: 7 ತಿಂಗಳ ಗರ್ಭಿಣಿ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

0
image_editor_output_image-1298370096-1750049826853

ಪುತ್ತೂರು: ಚಿಕ್ಕಪುತ್ತೂರು ನಿವಾಸಿ ಚಿಂತನ್ ಎಂಬವರ ಪತ್ನಿ 7 ತಿಂಗಳ ಗರ್ಭಿಣಿ ರೇಷ್ಮಾ ಅವರು ಜೂ.15 ರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ವರದಿಯಾಗಿದೆ.

ಪುತ್ತೂರು ಕಸಬಾದ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ಚಿಂತನ್, ಅವರ ಪತ್ನಿ ಹಾಗು ಪುತ್ರಿ ವಾಸ್ತವ್ಯ ಹೊಂದಿದ್ದರು. 4 ವರ್ಷಗಳ ಹಿಂದೆಯಷ್ಟೆ ಚಿಂತನ್ ಅವರ ವಿವಾಹ ಸುರತ್ಕಲ್ ನ. ರೇಷ್ಮಾ ಅವರ ಜೊತೆ ನಡೆದಿತ್ತು.

ಜೂ.15 ರ ರಾತ್ರಿ ರೇಷ್ಮಾ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಸ್ಥಳಕ್ಕೆ ಪುತ್ತೂರು ಪೊಲೀಸರು ಆಗಮಿಸಿ ಮಾಹಿತಿ ಪಡೆದಿದ್ದಾರೆ. ಮೃತರು ಗಂಡ ಚಿಂತನ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಚಿಂತನ್ ಅವರು ಈ ಹಿಂದೆ ನೆಲ್ಲಿಕಟ್ಟೆ ವಾರ್ಡ್‌ನಲ್ಲಿ ನಗರಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!