ವಿಟ್ಲ: ಎಸ್ ಡಿ ಪಿ ಐ ವಿಟ್ಲ ಬ್ಲಾಕ್ ಸಮಿತಿ ಮಾಸಿಕ ಸಭೆ
ವಿಟ್ಲ :ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ವಿಟ್ಲ ಬ್ಲಾಕ್ ಸಮಿತಿಯ ಮಾಸಿಕ ಸಭೆಯು ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಕಮರುದ್ದೀನ್ ಪುಣಚ ರವರ ಅಧ್ಯಕ್ಷತೆಯಲ್ಲಿ ವಿಟ್ಲದ ಪಕ್ಷದ ಕಛೇರಿಯಲ್ಲಿ ನಡೆಯಿತು.
ವೀಕ್ಷಕರಾಗಿ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಿದ್ದೀಕ್ ಅಲೆಕ್ಕಾಡಿ ಹಾಗೂ ಪುತ್ತೂರು ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಹೀಮ್ ಪುತ್ತೂರು ಭಾಗವಹಿಸಿ ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ತಯಾರಿ ಬಗ್ಗೆ ಮಾಹಿತಿ ಮತ್ತು ಪಕ್ಷದ ಸಂಸ್ಥಾಪನ ದಿನ ಜೂನ್ 21ರಂದು ಬ್ಲಾಕ್ ಮಟ್ಟದ ಪಕ್ಷದ ದಿನವನ್ನು ಕಂಬಳಬೆಟ್ಟುವಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ವಿಟ್ಲ ಬ್ಲಾಕ್ ಕಾರ್ಯದರ್ಶಿ ರಹೀಮ್ ಕಂಬಳಬೆಟ್ಟು ಸ್ವಾಗತಿಸಿ ವಂದಿಸಿದರು.




