June 21, 2026

ಮಂಗಳೂರು: ಕೆತ್ತಿಕ್ಕಲ್ ನಲ್ಲಿ ಗುಡ್ಡ ಕುಸಿತ

0
image_editor_output_image1692002486-1749965381276

ಮಂಗಳೂರು: ಕೆಲವು ವರ್ಷದ ಹಿಂದೆ ಭೂ ಕುಸಿತದ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದ ಕೆತ್ತಿಕ್ಕಲ್ ಪ್ರದೇಶದಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಗುಡ್ಡ ಕುಸಿತ ಸಂಭವಿಸಿದೆ. ಇದರಿಂದ ಕೆತ್ತಿಕ್ಕಲ್ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

ನಿನ್ನೆ (ಜೂ.15) ರಾತ್ರಿ ಸುಮಾರು 7.30ರ ವೇಳೆಗೆ ಗುಡ್ಡ ಕುಸಿದು ಮುಖ್ಯರಸ್ತೆಗೆ ಮಣ್ಣು, ಕಲ್ಲು ಬಿದ್ದಿದೆ. ಜೊತೆಗೆ ಮಳೆನೀರು ಇಳಿಜಾರು ಪ್ರದೇಶದಿಂದ ಹರಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೆ. ನಿರಂತರ ಭಾರೀ ಮಳೆಯಿಂದಾಗಿ ಇಲ್ಲಿ ಗುಡ್ಡ ಕುಸಿತ ಮುಂದುವರಿದಿದ್ದು, ಭಾರೀ ಭೂಕುಸಿತವಾಗುವ ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಗುಡ್ಡದ ಮೇಲ್ಭಾಗದಲ್ಲಿರುವ ಜನತೆಯನ್ನು ಸ್ಥಳಾಂತರ ಮಾಡಲಾಗಿದೆ. ಗುಡ್ಡ ಕುಸಿದ ಕಾರಣ ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಒಂದೇ ರಸ್ತೆಯಲ್ಲಿ ಎರಡು ಕಡೆಯ ಸಂಚಾರ ನೀಡಲಾಗಿದೆ. ರಾ.ಹೆ.169, ಮಂಗಳೂರು-ಮೂಡಬಿದ್ರೆ- ಕಾರ್ಕಳ ಸಂಪರ್ಕಿಸುವ ಈ ರಸ್ತೆಯಲ್ಲಿ ಸವಾರರು ಆತಂಕದಲ್ಲೇ ಪ್ರಯಾಣ‌ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!