March 13, 2026

ವಿಟ್ಲ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕಿಂಡರ್ ಗಾರ್ಟನ್ ಪ್ರಾರಂಭೋತ್ಸವ

0
image_editor_output_image864613431-1749912039234

ವಿಟ್ಲ: ಜನಪ್ರಿಯ ಸೆಂಟ್ರಲ್ ಸ್ಕೂಲ್‌ನಲ್ಲಿ ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳಿಗೆ ಅವರ ಪ್ರಥಮ ದಿನವನ್ನು ಸ್ಮರಣೀಯಗೊಳಿಸುವ ಉತ್ಸಾಹಭರಿತ ಕಾರ್ಯಕ್ರಮವೊಂದು ಜರುಗಿತು. ಶಾಲೆಯ ಆವರಣವು ಮಕ್ಕಳ ನಗುವಿನಿಂದ ಹಾಗೂ ಸಂಭ್ರಮದಿಂದ ಜಿವಂತವಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಟೆಡ್ಡಿ ಮತ್ತು ಮಿಕ್ಕಿ ಮಾಸ್ಕಾಟ್‌ಗಳು ಮಕ್ಕಳನ್ನು ಭಾನುವಾದವಾಗಿ ಬರಮಾಡಿಕೊಂಡು ಸಂತೋಷದ ಕ್ಷಣಗಳನ್ನು ಸೃಷ್ಟಿಸಿತು. ಬಣ್ಣ ಬಣ್ಣದ ಚಟುವಟಿಕೆಗಳು, ರಸದಾಯಕ ಆಟಗಳು ಹಾಗೂ ಮಕ್ಕಳಿಗೆ ನೀಡಲಾದ ಉಡುಗೊರೆಗಳು ಈ ಕಾರ್ಯಕ್ರಮದ ಚೆಲುವನ್ನು ಮತ್ತಷ್ಟು ಹೆಚ್ಚಿಸಿತು.

ಶೈಕ್ಷಣಿಕ ವರ್ಷದ ಉದ್ಘಾಟನೆಯನ್ನು ಶಾಲೆಯ ಶಿಕ್ಷಕಿಯರಾದ ಅರ್ಪಿತಾ ಮತ್ತು ಹರ್ಷಿತಾ ರವರು ನೆರವೇರಿಸಿದರು ಮತ್ತು ಮಕ್ಕಳ ಚಟುವಟಿಕೆಗೆ ಶಾಲೆಯ ನಿರ್ದೇಶಕರಾದ ನೌಶೀನ್ ಬದ್ರಿಯಾ ರವರು ಚಾಲನೆ ನೀಡಿದರು.

ಈ ಸಂದರ್ಭ  ಪ್ರಾಂಶುಪಾಲ ಲಿಬಿನ್ ಝೇವಿಯರ್, ಆಡಳಿತಾಧಿಕಾರಿ  ಸಫ್ವಾನ್ ಪಿಲಿಕಲ್ ಉಪಸ್ಥಿತರಿದ್ದರು. ಕಿಂಡರ್‌ಗಾರ್ಟನ್ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು.

ಶಾಲೆಯ ಆರಂಭದ ಈ ಹಂತವೇ ಮಕ್ಕಳಲ್ಲಿ ಶಾಲೆಯ ವಿಷಯದ ಮೇಲೆ ಪ್ರೀತಿಯು ಮೂಡಿಸಲು ಕಾರಣವಾಗಲಿದೆ ಎಂದು ಶಾಲಾ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!