March 13, 2026

ಪುತ್ತೂರು ಪುರಸಭಾ ಸದಸ್ಯ ಸಾವಿನಲ್ಲಿ ಸಂಶಯ-ದೂರು ದಾಖಲಿಸಿದ ಪುತ್ರ

0
image_editor_output_image1551006559-1749118780594

ಬಂಟ್ವಾಳ: ನೇತ್ರಾವತಿ ನದಿ ಕಿನಾರೆಯಲ್ಲಿ ನೀರಿನ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿದ ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಸಾವಿನ ಬಗ್ಗೆ ಸಂದೇಹವಿದ್ದು, ಕೂಲಂಕಷವಾಗಿ ತನಿಖೆ ನಡೆಸುವಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮೃತರ ಪುತ್ರ ವಿನೀಶ್ ದೂರು ನೀಡಿದ್ದಾರೆ.

ಪುತ್ತೂರು ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಟು ಬಂಟ್ವಾಳಕ್ಕೆ ಬಂದಿದ್ದ ಇವರು ಬೈಕ್ ನಿಲ್ಲಿಸಿ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿದ್ದರು. ಘಟನೆಯ ಬಳಿಕ ಸಾವಿನ ಬಗ್ಗೆ ಸಾಕಷ್ಟು ಸಂದೇಹಗಳು ಮನೆಯವರಿಗೆ ಬಂದಿದ್ದು, ಇವರ ಮೊಬೈಲ್ ಫೋನ್ ಗೆ ಬಂದಿರುವ ಕರೆಗಳನ್ನು ಪರಿಶೀಲನೆ ನಡೆಸಬೇಕು, ಅವರಿಗೆ ಬಂದಿರುವ ಕರೆಗಳನ್ನು ಪರಿಶೀಲನೆ ನಡೆಸಿದಾಗ ಸಾವಿಗೆ ಕಾರಣಗಳು ಸಿಗಬಹುದು ಎಂಬುದರ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ಹಾಗಾಗಿ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಅವರು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಮೊಬೈಲ್ ಫೋನ್ ಸಿಮ್ ನ್ನು ತಾಂತ್ರಿಕ ವಿಭಾಗಕ್ಕೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!