March 13, 2026

ಕೊಳತ್ತಮಜಲು: ತಲ್ವಾರ್ ದಾಳಿಗೆ ಗಂಭೀರ ಗಾಯಗೊಂಡಿದ್ದ ಖಲಂದರ್ ಶಾಫಿ ಆಸ್ಪತ್ರೆಯಿಂದ ಬಿಡುಗಡೆ

0
image_editor_output_image-1589651878-1749283059007

ಮಂಗಳೂರು: ಕೊಳತ್ತಮಜಲಿನ ಅಬ್ದುಲ್ ರಹ್ಮಾನ್ ಹತ್ಯೆ ವೇಳೆ ತಲ್ವಾರ್ ದಾಳಿಗೆ ಒಳಗಾಗಿದ್ದ ಖಲದಂರ್ ಶಾಫಿ ಅವರು ನಗರದ ಖಾಸಗಿ ಆಸ್ಪತ್ರೆಯಿಂದ ಶುಕ್ರವಾರ ಸಂಜೆ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.

ಮೇ 27 ರಂದು ಅಬ್ದುಲ್ ರಹ್ಮಾನ್ ಹಾಗು ಶಾಫಿ ಅವರ ಮೇಲೆ ದೀಪಕ್ ಹಾಗು ತಂಡದಿಂದ ತಲವಾರು ದಾಳಿ ನಡೆದಿತ್ತು. ಅದರಲ್ಲಿ ರಹ್ಮಾನ್ ಮೃತಪಟ್ಟಿದ್ದರು. ಖಲಂದರ್ ಶಾಫಿ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದರು.

ಶಾಫಿ ಅವರನ್ನು ಗೆಳೆಯರು ರಕ್ಷಣೆ ಮಾಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೆಲ ದಿನಗಳ ಕಾಲ ಐಸಿಯುನಲ್ಲಿ‌ ಚಿಕಿತ್ಸೆ ಪಡೆದು ನಂತರ ಚೇತರಿಸಿದ್ದ ಶಾಫಿ ಅವರು ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!