March 13, 2026

ವಿಟ್ಲ: ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ 2025-26

0
image_editor_output_image1758725530-1748881920769

2025-26 ನೇ ಸಾಲಿನ ಶೈಕ್ಷಣಿಕ ಧ್ಯೇಯ ವಾಕ್ಯದಂತೆ ದಿನಾಂಕ 02-06-2025 ನೇ ಸೋಮವಾರದಂದು ವಿಠಲ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಜರುಗಿತು.

ಪ್ರಾರಂಭೋತ್ಸವದ ಅಂಗವಾಗಿ ನೂತನವಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹೆತ್ತವರು ಶಿಕ್ಷಕರು ಶಾಲಾ ವಾಹನಗಳಲ್ಲಿ ಮೆರವಣಿಗೆಯೊಂದಿಗೆ ಶಾಲೆಯನ್ನು ಪ್ರವೇಶಿಸಿದರು. ಆರತಿ ಬೆಳಗಿ ವಿದ್ಯಾರ್ಥಿ ಗಳನ್ನು ಸ್ವಾಗತಿಸಲಾಯಿತು.ಸಭಾ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಧರ್ ಶೆಟ್ಟಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ  ಮೋಹನ್ ಸರ್ , ಸಂಸ್ಥೆಯ ನಿರ್ದೇಶಕಿಯಾದ ಶ್ರೀಮತಿ ಸಿರಿ ಎಲ್ ಎನ್ ಕೂಡೂರು,  ಆಡಳಿತಾಧಿಕಾರಿಗಳಾದ ರಾಧಾ ಕೃಷ್ಣ ಸರ್, ಪ್ರಾಂಶುಪಾಲರಾದ ಜಯರಾಮ ರೈ ಸರ್ ,ಉಪ ಪ್ರಾಂಶುಪಾಲೆಯಾದ ಶ್ರೀಮತಿ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಶ್ರೀಮತಿ ವಿದ್ಯಾಶ್ರೀ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ಝಕೀ ಯ ಸಹಕರಿಸಿದರು. ಎಲ್ಲಾ ಶಿಕ್ಷಕ- ಶಿಕ್ಷಕೇತರರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!