ವಿಟ್ಲ ಕೇಂದ್ರ ಜುಮಾ ಮಸೀದಿ,; ಮಹಾಸಭೆ
ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ಹಾಜಿ ಹಸನ್ ವಿಟ್ಲ ಇವರ ಸಭಾಧ್ಯಕ್ಷತೆಯಲ್ಲಿ ನಡೆಯಿತು.
ಖತೀಬ್ ಆರಿಫ್ ಬಾಖವಿ ದುವಾ ನೆರವೇರಿಸಿದರು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು ಪ್ರಾಸ್ತಾವಿಕ ಭಾಷಣ ಮಾಡಿದರು.
ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ಲೆಕ್ಕಪತ್ರ ಮಂಡಿಸಿದರು. ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ ವರದಿ ವಾಚನ ಮಾಡಿದರು.
ಹೊರೈಝನ್ ಪಬ್ಲಿಕ್ ಸ್ಕೂಲ್ ನ ಲೆಕ್ಕಪತ್ರವನ್ನು ಕಾರ್ಯದರ್ಶಿ ನೋಟರಿ ಅಬೂಬಕರ್ ಮಂಡಿಸಿದರು.
ಮಸೀದಿ ಕೋಶಾಧಿಕಾರಿ ಶರೀಫ್ ಪೊನ್ನೋಟು, ಉಪಾಧ್ಯಕ್ಷರಾದ ವಿ.ಎಸ್.ಇಬ್ರಾಹಿಂ ಹಾಗೂ ಮಹಮ್ಮದ್ ಗಮಿ,ಶಾಲೆಯ ಅಧ್ಯಕ್ಷ ಅಝೀಝ್ ಸನ,ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ ,ಕೋಶಾಧಿಕಾರಿ ಅಂದುಞಿ ಗಮಿ, ಶಾಲಾ ಆಡಳಿತ ಸಮಿತಿ ಸದಸ್ಯರು ಹಾಗೂ ಜಮಾಅತ್ ನವರು ಉಪಸ್ಥಿತರಿದ್ದರು




