March 12, 2026

ಭಾರತ-ಪಾಕಿಸ್ಥಾನ ನಡುವೆ ಉದ್ವಿಗ್ನ ಸ್ಥಿತಿ ಹಿನ್ನೆಲೆ: ಅರ್ಧದಲ್ಲಿ ನಿಂತ ಪಂಜಾಬ್ ಮತ್ತು ಡೆಲ್ಲಿ ನಡುವಿನ ಐಪಿಎಲ್ ಪಂದ್ಯ

0
20250508161615_dhraoniska.jpeg

ಪಂಜಾಬ್: ಭಾರತ-ಪಾಕಿಸ್ಥಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯುತ್ತಿದ್ದ ಪಂಜಾಬ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ನಿಲ್ಲಿಸಲಾಗಿದೆ. ಪಂದ್ಯದ ನಡುವೆಯೇ ಫ್ಲಡ್‌ಲೈಟ್ ಆರಿಸಲಾಗಿದೆ.

ಧರ್ಮಶಾಲಾದ ಮೈದಾನದ ನಾಲ್ಕು ಫ್ಲಡ್‌ಲೈಟ್ ಟವರ್‌ಗಳಲ್ಲಿ ಮೂರನ್ನು ಆರಿಸಲಾಗಿದೆ. ಪ್ರೇಕ್ಷಕರನ್ನು ಹೊರಹೋಗುವಂತೆ ಕೇಳಿಕೊಳ್ಳಲಾಗಿದೆ. ಮೈದಾನದ ಸುತ್ತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.

ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 10.1 ಓವರ್ ಗಳಲ್ಲಿ1 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು.

Leave a Reply

Your email address will not be published. Required fields are marked *

error: Content is protected !!