May 4, 2026

ಸಚಿವ ದಿನೇಶ್ ಗುಂಡೂರಾವ್ ಪತ್ನಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ: ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ದೂರು

0
IMG-20250508-WA0005.jpg

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ವಿರುದ್ಧ ಧರ್ಮ ಹಿಡಿದು ಆಕ್ಷೇಪಾರ್ಹ ಪದ ಬಳಸಿ ಅವಹೇಳನಕಾರಿಯಾಗಿ ಮಾತನಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ಶುರುವಾಗಿದೆ. ಟಬು ರಾವ್ ಅವರೇ ದಿನೇಶ್ ಗುಂಡೂರಾವ್ ಅವರನ್ನು ಲವ್ ಜಿಹಾದ್ ಗೆ ಒಳಪಡಿಸಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾ ವಿವಾದಿತ ಹೇಳಿಕೆ ನೀಡಿದ್ದರು.

ಇದೀಗ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡೆ ವಂದನಾ ಭಂಡಾರಿ ಅವರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ದಿನೇಶ್ ಗುಂಡೂರಾವ್‌ರವರು ಬುರ್ಖಾ ಹಾಕಿಕೊಂಡಿರುವಂತಹ ಉಸ್ತುವಾರಿ ಸಚಿವ ಅವರು ಮದುವೆಯಾಗಿರುವಂಥದ್ದು ಯಾರನ್ನು ಇಸ್ಲಾಂ ಧರ್ಮದ ಮಹಿಳೆಯನ್ನು ಮದುವೆಯಾಗಿದ್ದಾರೆ. ಹಿಂದು ಯುವತಿಯರನ್ನು ಮುಸಲ್ಮಾನರು ಲವ್ ಜಿಹಾದ್ ಮಾಡ್ತಾರೆ. ಇಲ್ಲಿ ಆಗಿರೋದು ಏನು ಅಂದ್ರೆ ಉಲ್ಟಾ. ದಿನೇಶ್ ಗುಂಡೂರಾವ್ ಅವರನ್ನು ಅವರ ಹೆಂಡತಿ ಲವ್ ಜಿಹಾದ್ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಅವರನ್ನು ಧಾರ್ಮಿಕವಾಗಿ ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ನಿಂದಿಸಿ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುತ್ತಾರೆ. ಹಾಗಾಗಿ ಶಾಸಕ ಹರೀಶ್ ಪೂಂಜಾ ಅವರು ಧರ್ಮಗಳ ದ್ವೇಷ ಮೂಡಿಸುವ ಮತ್ತು ಮಹಿಳಾ ನಿಂದನೆಯನ್ನು ಮಾಡಿದ್ದು ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದು ದೂರಿನಲ್ಲಿ ವಂದನಾ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!