March 12, 2026

ರಫೇಲ್ ಯುದ್ಧ ವಿಮಾನ ಹಾರಿಸಿದ ಮೊದಲ ಭಾರತೀಯ ಹಿಲಾಲ್ ಅಹ್ಮದ್

0
Who-Is-Hilal-Ahmad-Rather800_5f217e2ebeb52.jpeg

ನವದೆಹಲಿ: ಭಾರತೀಯ ವಾಯುಪಡೆಯ ಏರ್ ವೈಸ್ ಚೀಫ್ ಮಾರ್ಷಲ್ ಹಿಲಾಲ್ ಅಹ್ಮದ್ ರಫೇಲ್ ಯುದ್ಧ ವಿಮಾನ ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣಗಳ ಮೆಲೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ರಫೇಲ್ ಯುದ್ಧ ವಿಮಾನಗಳು ಪ್ರಮುಖ ಪಾತ್ರ ವಹಿಸಿವೆ ಎಂದು Mathrubhumi ವರದಿ ಮಾಡಿದೆ.

ಕಾಶ್ಮೀರದ ಅನಂತನಾಗ್‌ ಮೂಲದವರಾದ ಏರ್ ಕಮೋಡೋರ್, ಏರ್ ವೈಸ್ ಚೀಫ್ ಮಾರ್ಷಲ್ ಹಿಲಾಲ್ ಅಹ್ಮದ್ ಫ್ರಾನ್ಸ್‌ಗೆ ಭಾರತದ ಏರ್ ಅಟ್ಯಾಚ್ ಆಗಿದ್ದರು. ಜುಲೈ 27, 2020 ರಂದು ಫ್ರಾನ್ಸ್‌ನಿಂದ ಭಾರತಕ್ಕೆ ಬಂದ ರಫೇಲ್ ಜೆಟ್‌ಗಳನ್ನು ನಿರ್ವಹಿಸಿದ ಮೊದಲ ಭಾರತೀಯ ʼಪೈಲೆಟ್ʼ ಹಿಲಾಲ್ ಅಹ್ಮದ್ ಎನಿಸಿಕೊಂಡಿದ್ದಾರೆ. ರಫೇಲ್‌ ಜೆಟ್ ಗಳ ಆರಂಭದ ಪಯಣದಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ದೇಶದ ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ರಫೇಲ್ ಜೆಟ್ ಗಳನ್ನು ಮಾರ್ಪಾಟು ಮಾಡುವಲ್ಲಿ ಅವರು ನಿಕಟವಾಗಿ ಮೇಲ್ವಿಚಾರಣೆ ಮಾಡಿದ್ದರು ಎನ್ನಲಾಗಿದೆ.

3,000 ಗಂಟೆಗಳಿಗೂ ಹೆಚ್ಚು ಅಪಘಾತ ರಹಿತ ಹಾರಾಟದ ಅನುಭವ ಹೊಂದಿರುವ ಹಿಲಾಲ್ ಅಹ್ಮದ್ ಮಿರಾಜ್ 2000 ಮತ್ತು ಮಿಗ್-21 ನಂತಹ ಮುಂಚೂಣಿಯ ಯುದ್ಧ ವಿಮಾನಗಳಲ್ಲೂ ಹಾರಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!