May 4, 2026

ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಉಳ್ಳಾಲದಲ್ಲಿ ಮೀನಿನ ವ್ಯಾಪಾರಿಯ ಕೊಲೆ ಯತ್ನ: ಕೋಡಿಕೆರೆ ಲೋಕೇಶ್ ಬಂಧನ

0
image_editor_output_image410844726-1746521328025

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಪ್ರತೀಕಾರಕ್ಕೆ ಯತ್ನಿಸಿದ ಆರೋಪದಲ್ಲಿ ರೌಡಿಶೀಟರ್​ ಕೋಡಿಕೆರೆ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಲೋಕೇಶ್ ಕೋಡಿಕೆರೆ ಗ್ಯಾಂಗ್ ಪ್ರತಿಕಾರಕ್ಕೆ ಯತ್ನಿಸಿತು ಎಂದು ತಿಳಿದು ಬಂದಿದೆ. ಹೀಗಾಗಿ ಕಾವೂರು ಪೊಲೀಸರು ರೌಡಿಶೀಟರ್ ಕೋಡಿಕೆರೆ ಲೋಕೇಶ್ ನನ್ನು ಬಂಧಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಕುಂಟಿಕಾನ ಬಳಿ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ಮೀನಿನ ವ್ಯಾಪಾರಿಯನ್ನು ಕೋಡಿಕೆರೆ ಲೋಕೇಶ್ ಗ್ಯಾಂಗ್ ಕೊಲೆಗೆ ಯತ್ನಿಸಿತ್ತು ಎನ್ನಲಾಗಿದೆ. ಈ ವೇಳೆ ಹಿಂದೂ ಮಹಿಳೆಯೊಬ್ಬಳು ನೋಡಿ ಭಯದಿಂದ ಬೊಬ್ಬೆ ಹಾಕಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮಹಿಳೆಯ ಸಮಯಪ್ರಜ್ಞೆಯಿಂದ ಅವರು ಸಾವಿನಿಂದ ಬಚಾವ್ ಆಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಪ್ರಕರಣದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಲೋಕೇಶ್ ಗ್ಯಾಂಗ್ ದಾಳಿ ನಡೆಸಿದ್ದಾಗಿ ತಿಳಿದುಬಂದಿದೆ. ಈ ಹಿನ್ನೆಲೆ ಲೋಕೇಶ್ ​ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!