March 22, 2026

ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ:
ಮೂವರು ಮೃತ್ಯು, ಇಬ್ಬರು ಗಂಭೀರ

0
n3433651081640093834294fd567a618ffcdd9c2ae410fafa9348b59a8ed4fb0ef409b9154fc7608037d2a3.jpg

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

ಯಲ್ಲಾಪುರದ ನಿವಾಸಿ ವಾಸಿಂ ಖಾನ್ (40), ಸಯ್ಯದ್ ಇಸ್ಮಾಯಿಲ್ (65), ಸುಶೀಲಾ ಫರ್ನಾಂಡಿಸ್ (60) ಮೃತ ದುರ್ದೈವಿಗಳು.

ಇಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿಗೆ ಹಿಂಬದಿಯಿಂದ ಕಾರು ಗುದ್ದಿದ ಪರಿಣಾಮ ದುರ್ಘಟನೆ ನಡೆದಿದೆ. ಕಾರು ಯಲ್ಲಾಪುರದಿಂದ ಬೆಳಗಾವಿಗೆ ಹೊರಟ್ಟಿತ್ತು. ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Leave a Reply

Your email address will not be published. Required fields are marked *

error: Content is protected !!