March 13, 2026

ಬೆಳ್ತಂಗಡಿ: ನಗರ ಪಂಚಾಯತ್‌ ಮಾಜಿ ಅಧ್ಯಕ್ಷೆ ಪತಿಯ ಮೃತದೇಹ ಬಾವಿಯಲ್ಲಿ ಪತ್ತೆ

0
image_editor_output_image1543992286-1745570678810.jpg

ಬೆಳ್ತಂಗಡಿ: ಇಲ್ಲಿನ ನಗರ ಪಂಚಾಯತ್‌ ಮಾಜಿ ಅಧ್ಯಕ್ಷೆ ವೀಣಾ ಅವರ ಪತಿ ವಿನೋದ್‌ (48) ಅವರ ಮೃತದೇಹ ಸಂತೆಕಟ್ಟೆ ಬಳಿಯ ಖಾಸಗಿ ತೋಟದ ಬಾವಿಯಲ್ಲಿ ಎ. 24ರಂದು ಕಂಡುಬಂದಿದೆ.

ಮೃತದೇಹವನ್ನು ಮೇಲೆತ್ತಿ ಪರಿಶೀಲಿಸಿದ ಬಳಿಕ ಅದು ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯ ಅಲ್ಲಾಟಬೈಲು ನಿವಾಸಿ ವಿನೋದ್‌ ಅವರದು ಎಂದು ತಿಳಿದುಬಂದಿತ್ತು. ಅವರದು ಆತ್ಮಹತ್ಯೆಯೋ ಅಥವಾ ಇನ್ನಾವುದೋ ಕಾರಣದಿಂದ ಬಾವಿಗೆ ಬಿದ್ದಿರಬಹುದೋ ಎಂಬುದು ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!