March 13, 2026

ಈಜುಕೊಳದಲ್ಲಿ ಪಲ್ಟಿ ಹೊಡೆಯುವಾಗ ತಲೆಗೆ ಗಾಯ: ಯುವಕ ಸ್ಥಳದಲ್ಲೇ ಸಾವು

0
image_editor_output_image-427778362-1745043343595.jpg

ಬೀದರ್: ಈಜುಕೊಳದಲ್ಲಿ ಸ್ವಿಮ್ಮಿಂಗ್ ವೇಳೆ ಅವಘಡ ಸಂಭವಿಸಿ ಯುವಕ ಸಾವನ್ನಪ್ಪಿದ ಘಟನೆ ಬೀದರ್‌ನ ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ನಡೆದಿದೆ.

ಬೀದರ್‌ನ ಫೈಜ್‌ದರ್ಗಾ ಕಾಲನಿಯ ನಿವಾಸಿ ಸೈಯದ್ ಅಫಾನ್ (19) ಮೃತ ಯುವಕ. ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದೆ.

ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ ಯುವಕ ಪೂಲ್‌ನಲ್ಲೇ ಮುಳುಗಿ ಮೃತಪಟ್ಟಿದ್ದಾನೆ. ಈಜು ಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಗಂಭೀರ ಪೆಟ್ಟಾಗಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!