March 13, 2026

ಕಾಸರಗೋಡು: ಎಟಿಎಂ ದರೋಡೆಗೆ ವಿಫಲ ಯತ್ನ: ಗಂಟೆಗಳ ಅವಧಿಯಲ್ಲಿ ಆರೋಪಿ ಬಂಧನ

0
arrest_wxmddy.jpeg

ಕಾಸರಗೋಡು: ನಗರದಲ್ಲಿ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದ್ದು, ಆರೋಪಿಯನ್ನು ಗಂಟೆಗಳ ಅವಧಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಬೇಕಲದ ಸಫ್ವಾನ್ (19) ಬಂಧಿತ ಆರೋಪಿ. ಆರೋಪಿಯು ನಗರದ ಎಂ.ಜಿ ರಸ್ತೆಯ ಬ್ಯಾಂಕೊಂದರ ಎಟಿಎಂ ದರೋಡೆ ಮಾಡಲು ಸೋಮವಾರ ಮುಂಜಾನೆ ಯತ್ನಿಸಿದ್ದಾನೆ. ಎಟಿಎಂ ಮೆಶಿನ್ ಗೆ ಹಾನಿ ಎಸಗಲಾಗಿದ್ದು, ಯತ್ನ ವಿಫಲ ಗೊಂಡಾಗ ಈತ ಪರಾರಿಯಾಗಿದ್ದಾನೆ. ಮಂಗಳವಾರ ಬ್ಯಾಂಕ್ ಬಾಗಿಲು ತೆರೆಯಲು ಬಂದಾಗ ದರೋಡೆ ಯತ್ನ ಬೆಳಕಿಗೆ ಬಂದಿದೆ.

ಬ್ಯಾಂಕ್ ನ ಮೆನೇಜರ್ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣಾ ಮಂಗಳವಾರ ಸಂಜೆ ಕಾಸರಗೋಡು ಹಳೆ ಬಸ್ಸು ನಿಲ್ದಾಣ ಪರಿಸರ ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಮಾಡಲಾಗಿತ್ತು. ಈ ಬೈಕ್ ನ್ನು ಕಳವು ಮಾಡಿದ್ದು, ಇದೇ ಯುವಕ ಎಂದು ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಬಂದಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಎಟಿಎಂ ದರೋಡೆ ಪ್ರಕರಣದಲ್ಲಿ ಈತ ಶಾಮೀಲಾಗಿರುವುದು ತಿಳಿದು ಬಂದಿದೆ. ಕಳವುಗೈದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!