March 6, 2026

ಗ್ಯಾಸ್ ಕಟರ್ ಬಳಸಿ ATMನಿಂದ 18 ಲಕ್ಷ ರೂ. ಕಳವು

0
image_editor_output_image-718062694-1744259177494.jpg

ಕಲಬುರಗಿ: ಗ್ಯಾಸ್ ಕಟರ್ ಬಳಸಿ ಕಳ್ಳರು ಎಟಿಎಂನಿಂದ (ATM) 18 ಲಕ್ಷ ರೂ. ಕದ್ದೊಯ್ದಿರುವ ಘಟನೆ ಕಲಬುಗರಿಯ ರಾಮನಗರದ ಬಳಿ ಇರುವ ಎಸ್‌ಬಿಐ ಎಟಿಎಂಯಲ್ಲಿ ನಡೆದಿದೆ.

ಬುಧವಾರ ಸಂಜೆ 3 ಗಂಟೆ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ಎಟಿಎಂಗೆ ಹಣ ಹಾಕಿ ಹೋಗಿದ್ದರು. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಎಟಿಎಂನಲ್ಲಿ ಸೆಕ್ಯೂರಿಟಿ ಇಲ್ಲದನ್ನು ಗಮನಿಸಿದ ಖದೀಮರು ಕನ್ನ ಹಾಕಿದ್ದಾರೆ.

ಕಳ್ಳರು ಎಟಿಎಂನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬ್ಲಾಕ್ ಸ್ಪ್ರೇ ಮಾಡಿ ಗ್ಯಾಸ್ ಕಟ್ಟರ್‌ನಿಂದ ಎಟಿಎಂ ಮೆಷಿನ್ ಒಡೆದಿದ್ದಾರೆ. ಬಳಿಕ ಎಟಿಎಂನಲ್ಲಿದ್ದ 18 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಖದೀಮರು ಐ20 ಕಾರಿನಲ್ಲಿ ಬಂದು ಎಟಿಎಂ ದರೋಡೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಎಟಿಎಂನ ಬಳಿ ಐ20 ಕಾರು ನಿಂತಿರುವ ದೃಶ್ಯವು ಎಟಿಎಂ ಪಕ್ಕದಲ್ಲಿರೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!