March 10, 2026

ಬೆಳ್ತಂಗಡಿ: ಕಾಡಿನಲ್ಲಿ ಸಿಕ್ಕ ಮಗು ಪತ್ತೆಯಾದ ಬೆನ್ನಲ್ಲೇ ಮದುವೆಯಾದ ಜೋಡಿ

0
image_editor_output_image-1526590686-1744000591514.jpg

ಬೆಳ್ತಂಗಡಿ: ನಗರದ ಬೆಳಾಲಿನ ಮುಂಡೊಟ್ಟು ಮಾಯ ಕಾಡಿನಲ್ಲಿ ಸಿಕ್ಕ ಮಗುವಿನ ತಂದೆ ತಾಯಿ ಎ.2 ರಂದು ಪತ್ತೆಯಾದ ಬೆನ್ನಲ್ಲೇ ಇದೀಗ ಎ.6 ರಂದು ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ನಡ ಗ್ರಾಮದ ಕುತ್ತೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಈ ಮದುವೆ ನಡೆದಿದ್ದು, ಎರಡೂ ಕುಟುಂಬದವರು ಈ ಸತ್ಕಾರ್ಯದಲ್ಲಿ ಭಾಗಿಯಾಗಿದ್ದರು.

ಬೆಳಾಲು ಮಾಯದ ರಂಜಿತ್ ಮತ್ತು ಅದೇ ಸ್ಥಳೀಯ ಗ್ರಾಮದವಳಾದ ಸುಶ್ಮಿತಾ ಅವರ ವಿವಾಹ ನಿನ್ನೆ ನಡೆದಿದೆ. ಮಗುವನ್ನು ಮುಂದೆ ಕಾನೂನಾತ್ಮಕವಾಗಿ ಪಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!