March 5, 2026

ಉಳ್ಳಾಲ: ರೈಲಿನಲ್ಲಿ ಹೃದಯಾಘಾತದಿಂದ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

0
image_editor_output_image1821439091-1741303878997.jpg

ಉಳ್ಳಾಲ: ದಿಲ್ಲಿಯಿಂದ ಮಂಗಳೂರು ಕಡೆ ರೈಲಿನಲ್ಲಿ ವಾಪಸಾಗುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ, ಕುತ್ತಾರು ಮದನಿನಗರ ನಿವಾಸಿ ಅಬ್ದುಲ್ ಅಝೀಝ್ ಆರ್.ಕೆ.ಸಿ. (42) ಮೃತಪಟ್ಟ ಘಟನೆ ಮಾ. 5ರಂದು ಸಂಭವಿಸಿದೆ.

ಉದ್ಯಮಿಯಾಗಿದ್ದ ಅವರು ವ್ಯವಹಾರ ನಿಮಿತ್ತ ದಿಲ್ಲಿಗೆ ತೆರಳಿದ್ದರು. ಅಂಕೋಲಾ ಸಮೀಪ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮುಂದಿನ ನಿಲ್ದಾಣ ಕುಮಟಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಅದಾಗಲೇ ಅಬ್ದುಲ್ ಅಝೀಝ್ ಮೃತಪಟ್ಟಿದ್ದರು. ಕಾಂಗ್ರೆಸ್‌ನ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!