June 22, 2026

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲೇ ತಿರುಗಿ ನಿಂತ ಬುಲೆಟ್‌ ಟ್ಯಾಂಕರ್‌: ತಪ್ಪಿದ ಭಾರೀ ಅನಾಹುತ

0
image_editor_output_image-1661380934-1741127830658.jpg

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್‌ನಿಂದ ಕುಂಟಿಕಾನ ಕಡೆಗೆ ತೆರಳುವ ರಸ್ತೆಯಲ್ಲಿ ಸಾಗುತ್ತಿದ್ದ ಅಡುಗೆ ಅನಿಲ ಸಾಗಾಟದ ಬುಲೆಟ್‌ ಟ್ಯಾಂಕರ್‌ನ ಚಾಲಕ ಹಠಾತ್‌ ಬ್ರೇಕ್‌ ಹಾಕಿದ ಕಾರಣ ಡ್ರೈವರ್‌ ಕ್ಯಾಬಿನ್‌ ರಸ್ತೆಯಲ್ಲೇ ತಿರುಗಿ ನಿಂತಿದೆ.

ಎಂಆರ್‌ಪಿಎಲ್‌ ಕಡೆಗೆ ಗ್ಯಾಸ್‌ ತುಂಬಿಸಿಲು ತೆರಳುತ್ತಿದ್ದ ಖಾಲಿ ಟ್ಯಾಂಕರ್‌ ಕೆಪಿಟಿ ಕಡೆಯಿಂದ ವೇಗವಾಗಿ ಸಾಗಿದ್ದು, ಪ್ಲಾನೆಟ್‌ ಎಸ್‌ಕೆಎಸ್‌ ಜಂಕ್ಷನ್‌ ದಾಟಿ ಮುಂದಿನ ತಿರುವಿನಲ್ಲಿ ಚಾಲಕ ಹಠಾತ್‌ ಬ್ರೇಕ ಹಾಕಿದ್ದು, ಈ ವೇಳೆ ಡ್ರೈವರ್‌ ಕ್ಯಾಬಿನ್‌ ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದೆ.

ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೇರುವುದನ್ನು ತಪ್ಪಿಸಲು ಚಾಲಕ ಬ್ರೇಕ್‌ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!